Friday, September 29, 2023
spot_img
- Advertisement -spot_img

ಚಂದ್ರಬಾಬು ನಾಯ್ಡು ಬಂಧನ : ಬೆಂಬಲಿಸಲು ಹೊರಟಿದ್ದ ಪವನ್ ಕಲ್ಯಾಣ್ ಖಾಕಿ ವಶಕ್ಕೆ

ಬೆಂಗಳೂರು : ಶನಿವಾರವಷ್ಟೇ ಬಹುಕೋಟಿ ಸ್ಕಿಲ್ ಹಗರಣದಲ್ಲಿ ಬಂಧಿತರಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಚಂದ್ರಬಾಬು ನಾಯ್ಡು ಅವರಿಗೆ ಬೆಂಬಲ ಸೂಚಿಸಲು ತೆರಳುತ್ತಿದ್ದಾಗ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಮಾರ್ಗ ಮಧ್ಯೆಯೇ ಪೊಲೀಸರು ತಡೆ ಹಿಡಿದು ವಶಕ್ಕೆ ಪಡೆದಿದ್ದಾರೆ.

ಚಂದ್ರಬಾಬು ನಾಯ್ಡು ಅವರ ಬಂಧನವನ್ನು ಖಂಡಿಸಿದ್ದ ಪವನ್ ಕಲ್ಯಾಣ್ ಅವರು, ಶನಿವಾರವೇ ನಾಯ್ಡು ಅವರನ್ನು ಸಿಐಡಿ ಪೊಲೀಸರು ಕರೆದೊಯ್ದಿದ್ದ ವಿಜಯವಾಡಕ್ಕೆ ತೆರಳಲು ವಿಶೇ‍ಷ ವಿಮಾನವನ್ನು ಹೈದರಾಬಾದ್‌ನಲ್ಲಿ ಸಿದ್ಧಪಡಿಸಿದ್ದರು. ಆದರೆ ಅವರ ವಿಮಾನವು ಅಲ್ಲಿಂದ ಹಾರದಂತೆ ತಡಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಇದನ್ನು ಅರಿತುಕೊಂಡ ಪವನ್ , ರಸ್ತೆ ಮಾರ್ಗವಾಗಿ ವಿಜಯವಾಡದತ್ತ ತೆರಳುವಾಗ ಎನ್‌ಟಿಆರ್‌ ಜಿಲ್ಲೆಯಲ್ಲಿ ಅವರಿಗೆ ತೆರಳದಂತೆ ಪೊಲೀಸರು ಅಡ್ಡಿಪಡಿಸಿದ್ದರು.

ಇದನ್ನೂ ಓದಿ : ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ ಬ್ರಿಟನ್ ಪ್ರಧಾನಿ

ಇಂದು ಮತ್ತೆ ಕಾಲ್ನಡಿಗೆಯಲ್ಲಿಯೇ ಮಂಗಳಗಿರಿಯತ್ತ ಪವನ್‌ ಕಲ್ಯಾಣ್ ಅವರು ತೆರಳುತ್ತಿದ್ದಾಗ, ರಸ್ತೆಯಲ್ಲಿ ಮತ್ತೆ ತಡೆಹಿಡಿದ ಪೊಲೀಸರ ನಡೆಯನ್ನು ಖಂಡಿಸಿದ್ದ ಅವರು ರಸ್ತೆಯ ಮೇಲೆಯೇ ಕುಳಿತು ಸರ್ಕಾರ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಮುಂಜಾಗ್ರತಾ ಕ್ರಮವಾಗಿ ಅವರನ್ನು ವಶಕ್ಕೆ ಪಡೆದ ಪೊಲೀಸರು ವಿಜಯವಾಡಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles