ಬೆಂಗಳೂರು: ಆನೇಕಲ್‌ನಲ್ಲಿ ಮುಂಬರುವ ಚುನಾವಣೆಗಾಗಿ ಕಾಂಗ್ರೆಸ್ , ಜೆಡಿಎಸ್ 2 ಪಕ್ಷ ತಮ್ಮದೇ ಆದ ಸಿದ್ಧತೆ ಮಾಡಿಕೊಂಡಿದೆ.
ಜೆಡಿಎಸ್ ಪಕ್ಷದ ಕೆಪಿ ರಾಜು ಉತ್ಸಾಹದಲ್ಲಿದ್ದು, ಆನೇಕಲ್ ಶಾಸಕ ಬಿ ಶಿವಣ್ಣ, ಮೂರನೇ ಬಾರಿಯೂ ಗೆದ್ದೇ ಗೆಲ್ಲುವೆ ಅಂತಾ ಕಾನ್ಫಿಡೆನ್ಸ್ ನಲ್ಲಿದ್ದಾರೆ. ಬಿಜೆಪಿಯಿಂದ ಅಭ್ಯರ್ಥಿ ಯಾರೆಂದು ಗೊತ್ತಾಗಿಲ್ಲ, ಆದ್ರೆ ಬಿಜೆಪಿಯಿಂದ ಹುಲ್ಲಳ್ಳಿ ಶ್ರೀನಿವಾಸ್ , ಮಾಜಿ ಕೆಎಎಸ್ ಅಧಿಕಾರಿ ಕೆ ಶಿವರಾಮ್ , ಯುವ ಘಟಕ ಅಧ್ಯಕ್ಷ ಸಂದೀಪ್ ಕೂಡ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವ ರೇಸ್ ನಲ್ಲಿದ್ದಾರೆ. ಈ ಬಾರಿ ಯಾರಿಗೆ ಟಿಕೆಟ್ ಸಿಗುತ್ತೆ ಅನ್ನೋದು ಕಾದು ನೋಡಬೇಕಿದೆ.
ಅಂದಹಾಗೆ ಸಚಿವ ಆರ್ ಜಯಶಂಕರ್ ಹುಲ್ಲಳ್ಳಿ ಶ್ರೀನಿವಾಸ್ ಮನೆಗೆ ಭೇಟಿ ಕೊಟ್ಟಿದ್ದು, ಹಾಗೂ ಬಿಜೆಪಿ ಕೋರ್ ಕಮಿಟಿ ಮೀಟಿಂಗ್ ಗಳಲ್ಲಿ ಹುಲ್ಲಳ್ಳಿ ಶ್ರೀನಿವಾಸ್ ಗೆ ಟಿಕೆಟ್ ಅನೌನ್ಸ್ ಆಗಬಹುದು ಅಂತ ಬಿಜೆಪಿ ಬಲ್ಲ ಮೂಲಗಳು ತಿಳಿಸಿವೆ. ಜೆಡಿಎಸ್- ಕಾಂಗ್ರೆಸ್ ನಿಂದ ಅಭ್ಯರ್ಥಿಗಳು ಫೈನಲ್ ಆಗಿದ್ದು, ಬಿಜೆಪಿಯಿಂದ ಯಾರು ಕಣಕ್ಕಿಳಿತಾರೆ ಅನ್ನೋ ಕುತೂಹಲದಲ್ಲಿ ಈ 2 ಪಕ್ಷಗಳಿದ್ದು, ಶಿವಣ್ಣ ಈ ಬಾರಿ ಜೆಡಿಎಸ್ ಎಂಟ್ರಿಯಿಂದ ಶಾಕ್ ಆಗಿದ್ದಾರೆ.
ಜೆಡಿಎಸ್ ಸ್ಪರ್ಧೆಯಿಂದಾಗಿ ಕಾಂಗ್ರೆಸ್ ಈ ಬಾರಿ ಆನೇಕಲ್ ಕೈ ತಪ್ಪಬಹುದೆನೋ ಅನ್ನೋ ಭೀತಿ ಶುರುವಾಗಿದೆ. ತಮ್ಮ ಕಾರ್ಯಕರ್ತರು ಜೆಡಿಎಸ್ ಕಡೆಗೆ ಚದುರಿ ಹೋಗದಂತೆ ಪ್ರಯತ್ನ ಮಾಡುತ್ತಿದ್ದಾರೆ. ಜೆಡಿಎಸ್- ಕಾಂಗ್ರೆಸ್ ನಂತರ ಬಿಜೆಪಿ ಅಭ್ಯರ್ಥಿ ಯಾರು ಗೊತ್ತಾಗಬೇಕಿದ್ದು, ಸಭೆಯಲ್ಲಿ ತೀರ್ಮಾನವಾಗಲಿದೆ.