Wednesday, May 31, 2023
spot_img
- Advertisement -spot_img

ಕಾಂಗ್ರೆಸ್‌ನ ಎ.ಕೆ.ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ಆ್ಯಂಟನಿಯವರ ಪುತ್ರ ಅನಿಲ್ ಆ್ಯಂಟನಿ ಬಿಜೆಪಿ ಸೇರಿದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ವಿ.ಮುರಳೀಧರನ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು. ಕೇರಳ ಪ್ರದೇಶ ಡಿಜಿಟಲ್ ಮಾಧ್ಯಮ ಸಂಚಾಲಕ , ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಸಂಯೋಜಕ ಸ್ಥಾನ ಅನಿಲ್ ಆ್ಯಂಟನಿ ನಿರ್ವಹಿಸುತ್ತಿದ್ದರು.

ಮೋದಿ ಬೆಂಬಲಿಸಿ ಮಾಡಿದ್ದ ಟ್ವೀಟ್‌ನ್ನು ಡಿಲೀಟ್‌ ಮಾಡುವಂತೆ ನನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದು ಅನಿಲ್‌ ಆ್ಯಂಟನಿ ಆರೋಪಿಸಿದ್ದಾರೆ.

ಸಾಕ್ಷ್ಯಚಿತ್ರ ವಿಚಾರವಾಗಿ ಪ್ರಧಾನಿ ಮೋದಿ ಅವರನ್ನು ಬೆಂಬಲಿಸಿದ್ದ ಅನಿಲ್‌ ಆ್ಯಂಟನಿ, ಭಾರತದ ಸಂಸ್ಥೆಗಳಿಗಿಂತ ಬಿಬಿಸಿ ಸಂಸ್ಥೆಯನ್ನು ಶ್ರೇಷ್ಠ ಎಂದು ತಿಳಿಯುವುದು ಅಪಾಯಕಾರಿ ಎಂದು ಟ್ವೀಟ್‌ ಮಾಡಿದ್ದರು.
ಈ ಟ್ವೀಟ್‌ ವೈರಲ್‌ ಆಗುತ್ತಿದ್ದಂತೇ, ಅದನ್ನು ಡಿಲೀಟ್‌ ಮಾಡುವಂತೆ ಕಾಂಗ್ರೆಸ್‌ ಅನಿಲ್‌ ಆ್ಯಂಟನಿ ಅವರನ್ನು ಒತ್ತಾಯಿಸಿತ್ತು ಎನ್ನಲಾಗಿದೆ. ಇದರಿಂದ ಸಿಡಿದೆದ್ದಿರುವ ಅನಿಲ್‌ ಆ್ಯಂಟನಿ, ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಕೇರಳ ಕಾಂಗ್ರೆಸ್‌ ಘಟಕದ ವಿವಿಧ ಹುದ್ದೆಗಳಿಗೂ ಅನಿಲ್‌ ಆ್ಯಂಟನಿ ರಾಜೀನಾಮೆ ಸಲ್ಲಿಸಿದ್ದಾರೆ. ಅನಿಲ್ ಆಂಟನಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮದ ಕ್ಷಣವನ್ನು ಬಿಜೆಪಿ ಹಂಚಿಕೊಂಡಿದೆ.

Related Articles

- Advertisement -

Latest Articles