ಹುಬ್ಬಳ್ಳಿ : ಅಂಜುಮನ್ ಸಂಸ್ಥೆಯವರಿಗೆ ಈದ್ಗಾ ಮೈದಾನದ ಮೇಲೆ ಯಾವುದೇ ಹಕ್ಕು ಇಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.
ನಗರದ ಪಾಲಿಕೆ ಆವರಣದಲ್ಲಿ ಮಾತನಾಡಿ, ಈದ್ಗಾ ಮೈದಾನದ ಇತಿಹಾಸವೇನು? ಅದರ ಮಾಲೀಕತ್ವ ಯಾರದ್ದು ಎಂದು ಕೋರ್ಟ್ ಕೂಲಂಕುಷವಾಗಿ ಪರಿಗಣಿಸಿದೆ. ಬಹುಕಾಲದಿಂದ ಇದ್ದಂತಹ ವಾದ-ವಿವಾದಗಳನ್ನು ಕೋರ್ಟ್ ಆಲಿಸಿದೆ. ಈಗ ಸಿದ್ಧರಾಮಯ್ಯ ಸರ್ಕಾರ ಯಾವುದೇ ನೆಪ ಹೇಳದೆ, ಗಣೇಶೋತ್ಸವ ಆಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಇದನ್ನೂ ಓದಿ : ಸಂತೋಷ್ ಲಾಡ್ ದೊಡ್ಡ ವ್ಯಕ್ತಿಯಾಗ್ತಾರೆ ಭವಿಷ್ಯ ನುಡಿದ ಶ್ರೀ ಅಭಿನವ ಸಿದ್ಧಲಿಂಗ ಮಹಾಸ್ವಾಮೀಜಿ
ಈದ್ಗಾ ಮೈದಾನದ ಪರವಾನಗಿ ಹೋಲ್ಡರ್ ಅಂಜುಮನ್ ಸಂಸ್ಥೆಯವರು ಎಂದು ಹೇಳಿದ ಅವರು, ಮೈದಾನ ಮಹಾನಗರ ಪಾಲಿಕೆ ಅಡಿಯಲ್ಲಿದ್ದು ಮಹಾನಗರ ಪಾಲಿಕೆ ಇದರ ಮಾಲೀಕರು ಎಂದು ಕೋರ್ಟ್ ಹೇಳಿದೆ. ಅಂಜುಮನ್ ಸಂಸ್ಥೆಯವರಿಗೆ ವರ್ಷಕ್ಕೆ 2 ಸಲ ನಮಾಜ್ ಮಾಡಲು ಪಾಲಿಕೆ ಅವಕಾಶ ಕೊಡಬಹುದು.
ಆದರೆ, ಅಂಜುಮನ್ ಸಂಸ್ಥೆಯವರು ಈ ಮೈದಾನದಲ್ಲಿ ಗಣೇಶೋತ್ಸವ ಆಚರಿಸದಂತೆ ಕೋರ್ಟ್ ಮೊರೆ ಹೋಗಿದ್ದರು. ಆದರೆ ಕೋರ್ಟ್ ಅಂಜುಮನ್ ಸಂಸ್ಥೆಯವರಿಗೆ ಈ ಮೈದಾನದ ಮೇಲೆ ಯಾವುದೇ ಹಕ್ಕಿಲ್ಲ ಎಂದು ತೀರ್ಪು ನೀಡಿದೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.