ಬೆಂಗಳೂರು: ಬಿಜೆಪಿ ಎಂಎಲ್‌ಎ ಟಿಕೆಟ್ ನೀಡುವುದಾಗಿ ಉದ್ಯಮಿಗೆ ವಂಚಿಸಿರುವ ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಬಗೆದಷ್ಟು ವಿಚಾರಗಳು ಬಯಲಾಗುತ್ತಿವೆ. ಇದೀಗ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರ ಪರವಾಗಿ ಸಮೀಕ್ಷೆ ಫಲಿತಾಂಶ ಬರುವಂತೆ ಡೀಲಿಂಗ್ ನಡೆಸಿರುವ ಚೈತ್ರಾ ಕುಂದಾಪುರ ಸ್ನೇಹಿತೆ ಎನ್ನಲಾದ ಶೃತಿ ತುಂಬ್ರಿ ಆಡಿಯೋ ವೈರಲ್ ಆಗಿದೆ.
ಬಿಜೆಪಿ ಐಟಿ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಚೈತ್ರಾ ಕುಂದಾಪುರ ಸ್ನೇಹಿತೆ ಶೃತಿ ತುಂಬ್ರಿ ಹಾಗೂ ಗೋವಿಂದ ಬಾಬು ಪೂಜಾರಿಯ ಸ್ನೇಹಿತನದ್ದು ಎನ್ನಲಾದ ಆಡಿಯೋವೊಂದು ಈಗ ವೈರಲ್ ಆಗುತ್ತಿದೆ.
ಇದನ್ನೂ ಓದಿ: Nirmala Sitharaman : ಚೈತ್ರಾ ಕುಂದಾಪುರ ಹಾಡಿ ಹೊಗಳಿದ್ದ ನಿರ್ಮಲಾ ಸೀತಾರಾಮನ್ ; ಹಳೆಯ ಟ್ವೀಟ್ ವೈರಲ್
ಗೋವಿಂದಬಾಬು ಪೂಜಾರಿ ಪರ ಸಮೀಕ್ಷೆ ನಡೆಸಿ, ಪಾಸಿಟಿವ್ ರಿಪೋರ್ಟ್ ನೀಡುವುದಾಗಿ ಆಡಿಯೋದಲ್ಲಿ ಹೇಳಲಾಗಿದ್ದು, ಇದಕ್ಕಾಗಿ 3 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಡಲಾಗಿದೆ. ಬಿಜೆಪಿ ಹೈಕಮಾಂಡ್ ತಂಡ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಲಿದೆ. ಈ ತಂಡದಲ್ಲಿ ನನಗೆ ಪರಿಚಯದವರಿದ್ದಾರೆ. ಅವರಿಗೋಸ್ಕರ ನಾಲ್ಕೈದು ಜನರ ಜೊತೆಗೆ ಮಾತನಾಡುತ್ತೇನೆ. ಅವರ ವಿವರಗಳನ್ನು ಬಹಿರಂಗವಾಗಿ ಹೇಳುವುದಕ್ಕಾಗಲ್ಲ. ನಿಮ್ಮಂಥ ಸಾವಿರ ಜನ ಅಭ್ಯರ್ಥಿಗಳು ಇರ್ತಾರೆ. ಆದರೂ ಕೊನೆಗೆ ಬಿಜೆಪಿ ಜೊತೆಗೆ ಕೆಲಸ ಮಾಡುತ್ತಾರೆ ಎಂದು ಹೇಳಿರುವುದು ಆಡಿಯೋದಲ್ಲಿದೆ.
ಇದನ್ನೂ ಓದಿ: ಸಂವಿಧಾನ ಪೀಠಿಕೆ ವಾಚನಕ್ಕೆ ಆಹ್ವಾನ ನೀಡಿದ್ರೂ ಜೆಡಿಎಸ್-ಬಿಜೆಪಿ ಗೈರು: ಸಿಎಂ ವಿಷಾದ
ಸರ್ವೇಯಲ್ಲಿ ಗೋವಿಂದ ಬಾಬು ಪೂಜಾರಿ ಪರವಾದ ಫಲಿತಾಂಶ ಬರಲು 3ಲಕ್ಷ ರೂಪಾಯಿಗೆ ಬೇಡಿಕೆ ಇಡಲಾಗಿದೆ. ಬೆಂಗಳೂರಿನ ಕಾಡುಮಲ್ಲೇಶ್ವರ ದೇವಸ್ಥಾನದ ಹಿಂಬದಿಯಲ್ಲಿರುವ ಕಾಫಿ ಡೇಗೆ ಬಂದು ಕರೆ ಮಾಡುವಂತೆ ಶೃತಿ ತುಂಬ್ರಿ ಆತನಿಗೆ ಹೇಳಿರುವುದು ಆಡಿಯೋದಲ್ಲಿದೆ.
ಸದ್ಯ ಪ್ರಕರಣ ನಿತ್ಯ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಮತ್ತೋರ್ವ ಆರೋಪಿ ಸ್ವಾಮೀಜಿ ಹುಡುಕಾಟ ತೀವ್ರಗೊಂಡಿದೆ. ಇತ್ತ ಸಿಸಿಬಿ ಬಂಧನದಲ್ಲಿರುವ ಚೈತ್ರಾ ಕುಂದಾಪುರ ವಿಚಾರಣೆ ಮುಂದುವರೆದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.