ಬೆಂಗಳೂರು : ಗ್ಯಾರಂಟಿಗಳ ಭರವಸೆ ನೀಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಈಗಾಗಲೇ ನಾಲ್ಕು ಯೋಜನೆಗಳನ್ನು ರಾಜ್ಯದ ಜನತೆಗೆ ನೀಡಿದೆ. ಇದೀಗ ರಾಜ್ಯ ಆರೋಗ್ಯ ಇಲಾಖೆಯಿಂದ ಹೊಸ ಯೋಜನೆಯೊಂದನ್ನು ಸರ್ಕಾರ ತರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಯೋಜನೆಗೆ ಇಲಾಖೆಯು ‘ಗೃಹ ಆರೋಗ್ಯ’ ಎಂಬ ಹೆಸರಿಟ್ಟಿದ್ದು, ಸದ್ಯದಲ್ಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ‘ಇಂಡಿಯಾ ಹೆಸರು ಬದಲಿಸಿ ಬಿಜೆಪಿಯವರು ತಮ್ಮ ಸೋಲನ್ನು ನೋಡುತ್ತಿದ್ದಾರೆ’
ಏನಿದು ಗೃಹ ಆರೋಗ್ಯ ಯೋಜನೆ..?
ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿ ಮನೆ ಬಾಗಿಲಿಗೆ ಬಂದು ಮನೆಯವರ ಆರೋಗ್ಯ ವಿಚಾರಣೆ ಮಾಡಲಿದ್ದಾರೆ. ಈ ಮೂಲಕ ಮನೆಯ ಪ್ರತಿ ಸದಸ್ಯರ ಆರೋಗ್ಯ ಸಮಸ್ಯೆಯನ್ನು ತಿಳಿದುಕೊಳ್ಳಲಿದ್ದಾರೆ. ವಿಚಾರಣೆ ವೇಳೆ ಬಿಪಿ, ಶುಗರ್ ಹಾಗೂ ಇತರ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ, ಅವರನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ.
ಯೋಜನೆ ಹೇಗೆ ಕಾರ್ಯನಿರ್ವಹಿಸಲಿದೆ..?
ಆರೋಗ್ಯ ಸಮಸ್ಯೆಯನ್ನು ತಿಳಿದುಕೊಂಡ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರ ಮೂಲಕ ಪ್ರತಿ ಮನೆಗೆ ಔಷಧಿ ತಲುಪಲಿದ್ದು, ಈ ಮೂಲಕ ಆರೋಗ್ಯ ಕೇಂದ್ರಕ್ಕೆ
ಹೋಗಲು ಸಾಧ್ಯವಾಗದ ಎಷ್ಟೋ ಮಂದಿಗೆ ಈ ಯೋಜನೆ ಫಲಕಾರಿಯಾಗಲಿದೆ.
ಮನೆ ಮನೆಗೆ ಹೋಗಿ ಆರೋಗ್ಯ ತಪಾಸಣೆ ಮಾಡುವುದರಿಂದ ಮನೆಯ ಪ್ರತಿಯೊಬ್ಬ ಸದಸ್ಯನ ಆರೋಗ್ಯ ಕಾಳಜಿ ವಹಿಸಲು ನೆರವಾಗಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವವರಿಗೂ ಈ ಯೋಜನೆಯ ಮೂಲಕ ಚಿಕಿತ್ಸೆ ಸಿಗಲಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.