Friday, September 29, 2023
spot_img
- Advertisement -spot_img

ದೇಶದ ಹೆಸರು ‘ಭಾರತ್’ ಎಂದು ಬದಲಾಯಿಸುವುದು ಕೇವಲ ವದಂತಿ; ಕೇಂದ್ರ ಸಚಿವ

ನವದೆಹಲಿ: ದೇಶದ ಹೆಸರು ಅಧಿಕೃತವಾಗಿ ‘ಭಾರತ್’ ಎಂದು ಬದಲಾಯಿಸಲು ಕೇಂದ್ರ ನಿರ್ಧರಿಸಿದೆ ಎಂಬ ಸುದ್ದಿ ಹರಿಡಿರುವ ನಡುವೆ ಇದೆಲ್ಲಾ ವದಂತಿಯಷ್ಟೇ ದೇಶದ ಹೆಸರು ಬದಲಾವಣೆಯಿಲ್ಲ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಇದು ಕೇವಲ ವದಂತಿ, ಆದರೆ ಇದು ‘ಭಾರತ್’ ಎಂಬ ಹೆಸರಿನ ಬಗ್ಗೆ ಅವರಿಗಿರುವ ಮನಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅವರು (ವಿಪಕ್ಷಗಳು) ಭಾರತದ ವಿರುದ್ಧ ಇದ್ದಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಒದಗಿಸುತ್ತದೆ. ಆದರೆ ಇಂಡಿಯಾ ಎಂಬ ಹೆಸರನ್ನು ಬದಲಾಯಿಸುವ ಯೋಜನೆ ಕೇಂದ್ರದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಲೋಕಸಭೆಗೆ ಅಖಿಲೇಶ್ ಸಜ್ಜು; ಎಲ್ಲಾ ಘಟಕಗಳಿಗೂ ಹೊಸ ಪದಾಧಿಕಾರಿಗಳ ನೇಮಕ

ರಾಷ್ಟ್ರಪತಿಯ ಔತಣಕೂಟ ಆಮಂತ್ರಣ ಪತ್ರದಲ್ಲಿ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ನಮೂದಿಸಿದ್ದರ ಕುರಿತು ಪ್ರತಿಕ್ರಿಯಿಸಿದ ಅವರು, ಅದರಲ್ಲಿ ತಪ್ಪೇನಿದೆ. ಭಾರತ್ ಎನ್ನುವುದು ಸಹ ಇಂಡಿಯಾ ಪರಿಕಲ್ಪನೆಯಾಗಿದೆ. ಈ ಹಿಂದೆಯೂ ಇಂಡಿಯಾ ಜಾಗದಲ್ಲಿ ಭಾರತ್ ಎಂಬ ಹೆಸರು ಬಳಕೆಯಾಗಿರುವುದನ್ನು ನಾನು ನೋಡಿದ್ದೇನೆ. ಇದೇನು ಹೊಸದಲ್ಲ, ಇದರಲ್ಲಿ ಆಶ್ಚರ್ಯ ಪಡಬೇಕಾದ ಅಂಶವೇನಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಆಸಿಯಾನ್ ಶೃಂಗಸಭೆ: ಜಕಾರ್ತಾ ತಲುಪಿದ ಮೋದಿ; ಅನಿವಾಸಿ ಭಾರತೀಯರಿಂದ ಅದ್ಧೂರಿ ಸ್ವಾಗತ

ಭಾರತ್ ಎಂಬ ಹೆಸರನ್ನು ಯಾಕೆ ವಿನಾಕಾರಣ ವಿರೋಧಿಸಬೇಕು? ಅವರಿಗೆ ಭಾರತ್ ಎಂಬ ಹೆಸರು ಅಲರ್ಜಿಯೇ? ರಾಷ್ಟ್ರದ ಮುಂದೆ ಪಕ್ಷವನ್ನು ಇಟ್ಟು ರಾಜಕೀಯದ ಮರಳಿನಲ್ಲಿ ಸಿಲುಕಿರುವವರು ಇವರೆ. ವಿದೇಶಿ ನೆಲದಲ್ಲಿ ನಿಂತು ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.

ಈ ಮೊದಲು ಬಿಜೆಪಿ ನಾಯಕರು ದೇಶದ ಹೆಸರು ‘ಭಾರತ್’ ಎಂದು ಬದಲಾವಣೆಯಾಗಲಿದೆ ಎಂದು ಹೇಳಿಕೊಂಡಿದ್ದರು. ಅಲ್ಲದೆ ಅದಕ್ಕೆ ಪೂರಕವಾದ ಕೆಲ ಪತ್ರಗಳನ್ನೂ ಸಾರ್ವಜನಿಕವಾಗಿ ಹಂಚಿಕೊಂಡಿದ್ದರು. ಆದರೆ ಸರ್ಕಾರದಿಂದ ಅಧಿಕೃತವಾಗಿ ಈ ಕುರಿತು ಹೇಳಿಕೆಯಾಗಲಿದೆ, ಪ್ರಕಟಣೆಯಾಗಲಿ ಹೊರಬಿದ್ದಿಲ್ಲ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles