Thursday, June 8, 2023
spot_img
- Advertisement -spot_img

ಇದು ನನ್ನ ಕೊನೆಯ ಚುನಾವಣೆ, ಬಿಜೆಪಿ ಗೆಲ್ಲಿಸಲು ಶ್ರಮಿಸುವೆ : ಅಪ್ಪಚ್ಚು ರಂಜನ್

ಮಡಿಕೇರಿ: ಇದು ನನ್ನ ಕೊನೆಯ ಚುನಾವಣೆ. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಉಳಿಸಿಕೊಳ್ಳುತ್ತೇವೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಈ ಚುನಾವಣೆ ನನ್ನ ಕೊನೆಯ ಚುನಾವಣೆಯಾಗಿರುತ್ತದೆ. ಮತದಾರರ ಬಳಿ ಕೊನೆಯ ಬಾರಿ ಆಶೀರ್ವಾದ ಮಾಡಲು ಹೇಳುತ್ತೇವೆ. ಅಲ್ಲದೇ ಮುಂದಿನ ದಿನಗಳಲ್ಲಿ ಕಾರ್ಯಕರ್ತರನ್ನು ಉತ್ತಮ ನಾಯಕರನ್ನಾಗಿ ಮಾಡಿ ಅವರ ಪರ ಕೆಲಸ ಮಾಡಲು ನಿಶ್ಚಯಿಸಿದ್ದೇನೆ ಎಂದರು.

ಪ್ರಕೃತಿ ವಿಕೋಪದ ಸಂದರ್ಭದಿಂದ ಹಿಡಿದು ಕೋವಿಡ್ ಸಮಯದವರೆಗೂ ನಾವು ಜನರೊಂದಿಗೆ ಇದ್ದೆವು. ಕಳೆದ ಬಾರಿ ಮಡಿಕೇರಿ ಕ್ಷೇತ್ರದ ಬಡ ಜನತೆ ನಮಗೆ ಆಶೀರ್ವಾದ ಮಾಡಿದರು. ಈ ಬಾರಿ ನಮಗೆ ಬೆಂಬಲ ಕೊಟ್ಟು ಗೆಲುವಿಗೆ ಕಾರಣರಾಗುತ್ತಾರೆ. ಈ ಬಾರಿ ಮಡಿಕೇರಿ ಕ್ಷೇತ್ರದ ಜನರು ನಮ್ಮ ಪರವಾಗಿ ಇದ್ದಾರೆ. ನಾವು ಜಿಲ್ಲೆಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗುತ್ತದೆ ಎಂದು ತಿಳಿಸಿದರು.

ಟಿಕೆಟ್ ಕೊಡದೇ ಇರೋ ಹಿನ್ನೆಲೆ ಅನೇಕ ನಾಯಕರು ರಾಜೀನಾಮೆ ನೀಡಲು ನಿರ್ಧರಿಸಿದ್ದು,ರಾಣಿಬೆನ್ನೂರುಕ್ಷೇತ್ರದ ಆಕಾಂಕ್ಷಿಯಾಗಿದ್ದ ಆರ್. ಶಂಕರ್ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Related Articles

- Advertisement -spot_img

Latest Articles