Friday, September 29, 2023
spot_img
- Advertisement -spot_img

ಭಾರತದಲ್ಲಿ ತಯಾರಿಕಾ ಘಟಕ ಹೆಚ್ಚಿಸಲು ಆಪಲ್ ಸಜ್ಜು; ಅಧಿಕಾರಿಗಳೊಂದಿಗೆ ಸಭೆ!

ನವದೆಹಲಿ: ಮೊಬೈಲ್ ಫೋನ್ ತಯಾರಿಕಾ ಜಗತ್ತಿನ ದೈತ್ಯ ಸಂಸ್ಥೆ ಆಪಲ್ ಭಾರತದ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಲು ಮುಂದಾಗಿದೆ. ಹೀಗಾಗಿ ದೇಶೀಯ ತಯಾರಿಕಾ ಘಟಕ ಹೆಚ್ಚಿಸಲು ಮುಂದಾಗಿದೆ. ಈ ಕುರಿತು ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿರುವ ಐಫೋನ್ ತಯಾರಿಕ ಘಟಕದ ಸಿಬ್ಬಂದಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.

“ಜುಲೈನಲ್ಲಿ ಆಪಲ್ ಒಂದು ಕರಡು ಮುಂದಿಟ್ಟು ಸಭೆ ನಡೆಸಿತ್ತು. ಸರ್ಕಾರ ನಮ್ಮ ಸಂಸ್ಥೆಯ ಮುಂದಿನ ಯೋಜನೆಗಳೇನು ಎಂಬುದನ್ನು ತಿಳಿಯಬೇಕಿತ್ತು. ಆಪಲ್ ತನ್ನ ದೇಶೀಯ ಘಟಕದ ಬೇಸ್ ಅನ್ನು ಹೆಚ್ಚಿಸಲು ಆಸಕ್ತಿ ಹೊಂದಿದೆ. ಈ ಸಭೆಯು ಪೂರೈಕೆ ಸರಪಳಿಯ ಉತ್ತಮ ತಿಳುವಳಿಕೆ ಮತ್ತು ಹೆಚ್ಚಿನ ದೇಶೀಕರಣದ ಮೇಲೆ ಕೇಂದ್ರೀಕರಿಸಿತು. ಸ್ಮಾರ್ಟ್‌ಫೋನ್ ತಯಾರಿಕಾ ಉದ್ಯಮದ ಒಟ್ಟಾರೆ ಬೆಳವಣಿಗೆಯನ್ನು ಸಹ ಪರಿಶೀಲಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ‘ಗೃಹಲಕ್ಷ್ಮಿ’ ಜಾರಿಗೆ ಭರ್ಜರಿ ತಯಾರಿ; ಮೈಸೂರಲ್ಲಿಂದು ಡಿಸಿಎಂ ಸಭೆ!

ರಾಜ್ಯದಲ್ಲೂ ಹೂಡಿಕೆ

ಐಫೋನ್ ಬಿಡಿಭಾಗಗಳ ತಯಾರಿಕಾ ಕಂಪನಿ ಫಾಕ್ಸ್‌ಕಾನ್ ರಾಜ್ಯದಲ್ಲಿ ಘಟಕ ಸ್ಥಾಪಿಸಲು ಮುಂದಾಗಿದೆ.
12,000 ಉದ್ಯೋಗಗಳನ್ನು ಸೃಷ್ಟಿಸುವ ಐಫೋನ್ ಬಿಡಿಭಾಗಗಳನ್ನು ಉತ್ಪಾದಿಸುವ ಸೌಲಭ್ಯವನ್ನು ಸ್ಥಾಪಿಸಲು ಸುಮಾರು 350 ಮಿಲಿಯನ್ ಡಾಲರ್‌ ಹಣವನ್ನು ಕಂಪನಿ ಹೂಡಿಕೆ ಮಾಡಲಿದೆ. ಇದಕ್ಕಾಗಿ ದೊಡ್ಡಬಳ್ಳಾಪುರ ಸಮೀಪ ಭೂಮಿ ನಿಗದಿ ಮಾಡಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles