ಬೆಂಗಳೂರು: ಸ್ಯಾಂಟ್ರೋ ರವಿ ಬಂಧನಕ್ಕೆ ಮೈಸೂರು ಪೊಲೀಸರು ತಂಡಗಳನ್ನು ರಚಿಸಿಕೊಂಡು ಹುಡುಕುತ್ತಿದ್ದಾರೆ. ಅವನ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಸ್ಯಾಂಟ್ರೋ ರವಿ ಬೆಳೆಯಲು ಕಾಂಗ್ರೆಸ್ಸೇ ಕಾರಣ. ಕಾಂಗ್ರೆಸ್ ಅಧಿಕಾರಾವಧಿಯಲ್ಲೇ ಅವನು ಬೆಳೆದಿರೋದು. ದೂರು ದಾಖಲಾಗಿದೆ ಅವನ್ನು ಬಿಡೋದಿಲ್ಲ, ಬಂಧಿಸಿ ಮಟ್ಟಹಾಕುತ್ತೇವೆ ಎಂದರು.
ಸ್ಯಾಂಟ್ರೋ ರವಿ ಬಿಜೆಪಿ ಸಚಿವರ ಜತೆ ಮಾತನಾಡಿರುವ ಆಡಿಯೋ, ವಿಡಿಯೋ, ಫೋಟೋಗಳನ್ನು ತೆಗೆಸಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಜನಪ್ರತಿನಿಧಿಗಳಾದವರು ಸಾರ್ವಜನಿಕ ಜೀವನದಲ್ಲಿ ಇರುತ್ತಾರೆ. ಎಲ್ಲರಿಗೂ ಲಭ್ಯವಿರುತ್ತಾರೆ. ಯಾರು ಬೇಕಾದರೂ ಬಂದು ಭೇಟಿ ಮಾಡಬಹುದು ಎದು ವಿವರಿಸಿದರು.
ನಮ್ಮ ಮನೆಗೆ ಬರೋ ಎಲ್ಲರಿಗೂ ಪೊಲೀಸ್ ಸರ್ಟಿಫಿಕೇಟ್ ತೆಗೆದುಕೊಂಡು ಬನ್ನು ಅನ್ನೋಕೆ ಆಗುತ್ತಾ. ಬಂದವರಲ್ಲಿ ಅನೇಕರು ನಮ್ಮೊಂದಿಗೆ ಫೋಟೋ ತೆಗೆದುಕೊಳ್ತಾರೆ. ಏನು ಮಾಡೋದು’ ಎಂದರು.ಸ್ಯಾಂಟ್ರೊ ರವಿಯ ಅನೈತಿಕ ಜಾಲ ಬೆಳೆದು ಹೆಮ್ಮರವಾಗಿದ್ದೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಆತನ ಮಹಾಪೋಷಕರೇ ಕೈ ಪಕ್ಷ ಎಂದು ಕಿಡಿಕಾರಿದರು.
ಕೊನೆಗೂ ಜೈಲಿಗೆ ಹೋದ ಸ್ಯಾಂಟ್ರೊ ರವಿ ಹೊರ ಬಂದದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ, ಅವನ ವಿಳಾಸ ಕಾಂಗ್ರೆಸ್ ನಾಯಕರಿಗೆ ಗೊತ್ತಿರಬೇಕು. ಗೊತ್ತಿದೆ ಸಹ ಎಂದಿದೆ ಬಿಜೆಪಿ ಆರೋಪಿಸಿದೆ.