Wednesday, May 31, 2023
spot_img
- Advertisement -spot_img

ಪ್ರಧಾನಿ ಮೋದಿಗೆ ನಿದ್ರಾಹೀನತೆ ಕಾಯಿಲೆಯಿದೆ:ಕೇಜ್ರಿವಾಲ್

ನವದೆಹಲಿ: ಪ್ರಧಾನಿ ಮೋದಿ ನಿದ್ರಾಹೀನತೆಯ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.

ಆಮ್ ಆದ್ಮಿ ಪಕ್ಷದ ಮೋದಿ ಹಟಾವೋ-ದೇಶ್ ಬಚಾವೋ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಬಿಜೆಪಿ ಕಾರ್ಯಕರ್ತನೊಂದಿಗೆ ಮಾತನಾಡಿದ್ದೆ. ಆ ವೇಳೆ ಬಿಜೆಪಿ ಕಾರ್ಯಕರ್ತ, ಮೋದಿ ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಾರೆ, ಕೇವಲ ಮೂರು ಗಂಟೆ ಮಲಗುತ್ತಾರೆ ಎಂದು ಹೇಳಿದ್ದರು. 3 ಗಂಟೆಗಳ ನಿದ್ದೆಯಿಂದ ಕೆಲಸ ಹೇಗೆ ಎಂದು ಕೇಳಿದಾಗ, ಆತ, ಮೋದಿಗೆ ದೈವಿಕ ಶಕ್ತಿ ಇದೆ ಎಂದು ಉತ್ತರಿಸಿದ್ದ. ಅದು ದೈವಿಕ ಶಕ್ತಿಯಲ್ಲ, ಇದು ನಿದ್ರಾಹೀನತೆ ಎಂದು ನಾನು ಹೇಳಿದೆ. ಏಕೆಂದರೆ ಪ್ರಧಾನಿ ದಿನವಿಡೀ ಕೋಪಗೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

ರಾಹುಲ್‌ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ಈ ಬಗ್ಗೆ ಪ್ರತಿಕ್ರಿಯಿಸಿ ವಿರೋಧ ಪಕ್ಷಗಳ ಮುಖಂಡರನ್ನು ನಿರ್ಮೂಲನೆ ಮಾಡಲು ಬಿಜೆಪಿ ಹೊರಟಿದೆ ಎಂದು ಆರೋಪಿಸಿದ್ದಾರೆ. ಮಾನನಷ್ಟ ಮೊಕದ್ದಮೆಯಂತಹ ಪ್ರಕರಣದಲ್ಲಿ ರಾಹುಲ್ ಗಾಂಧಿಯವರನ್ನು ಸಿಲುಕಿಸಿರೋದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

Related Articles

- Advertisement -

Latest Articles