Thursday, June 8, 2023
spot_img
- Advertisement -spot_img

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆ.ಎಂ. ಶಿವಲಿಂಗೇಗೌಡ

ಬೆಂಗಳೂರು : ಜೆಡಿಎಸ್​​​​ ಶಾಸಕ ಶಿವಲಿಂಗೇಗೌಡ ಸ್ಪೀಕರ್​​ ಕಾಗೇರಿ ನಿವಾಸಕ್ಕೆ ಭೇಟಿ ನೀಡಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. 400ಕ್ಕೂ ಅಧಿಕ ಕಾರ್ಯಕರ್ತರ ಜೊತೆ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿರುವ ಸ್ಪೀಕರ್ ಕಾಗೇರಿ ನಿವಾಸಕ್ಕೆ ಜೆಡಿಎಸ್​​ ಶಾಸಕ ಭೇಟಿ ನೀಡಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ಈಗಾಗಲೇ ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿರುವ ಶಿವಲಿಂಗೇಗೌಡ ಅವರಿಗೆ ತಮ್ಮ ಬೆಂಬಲಿಗರ ಸಭೆಯಲ್ಲಿ ಕಾಂಗ್ರೆಸ್ ಸೇರಲು ಸಹಮತ ದೊರೆತಿದೆ. ಪಕ್ಷದಲ್ಲಿ ನಿರೀಕ್ಷಿತ ಮನ್ನಣೆ, ಸ್ಥಾನಮಾನ ಸಿಗದ ಕಾರಣ ಅವರು ಜೆಡಿಎಸ್ ತೊರೆಯಲು ನಿರ್ಧರಿಸಿದ್ದರು. ಇದೀಗ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. 

ಈ ವೇಳೆ ಕಾಗೇರಿ ಹಾಗೂ ಶಿವಲಿಂಗೇಗೌಡ ಅವರು ವಿಧಾನಸಭೆ ಅಧಿವೇಶನದ ವೇಳೆ ಜನಪರವಾಗಿ ಆಡಿದ ಮಾತುಗಳನ್ನು ಪರಸ್ಪರ ಶ್ಲಾಘಿಸಿದರು. 2008ರಲ್ಲಿ ಮೊದಲ ಬಾರಿ ಶಾಸನಸಭೆಗೆ ಆಯ್ಕೆಯಾಗಿದ್ದ ಅವರು 2018ರ ಚುನಾವಣೆಯಲ್ಲಿ ಅರಸಿಕೆರೆ ವಿಧಾನಸಭೆ ಕ್ಷೇತ್ರದಲ್ಲಿ 93,986 ಮತಗಳನ್ನು ಪಡೆದು ಜಯಗಳಿಸಿದ್ದರು.

Related Articles

- Advertisement -spot_img

Latest Articles