ಕೊಪ್ಪಳ : ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಸಹೋದರನ ವಿರುದ್ಧ ಪತ್ನಿ ಅರುಣಾಲಕ್ಷ್ಮೀ ಅವರನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಕಣಕ್ಕಿಳಿಸುವುದಾಗಿ ಕೆಆರ್‌ಪಿಪಿ ಸಂಸ್ಥಾಪಕ ಜನಾರ್ಧನ ರೆಡ್ಡಿ ಘೋಷಣೆ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ ಬಳ್ಳಾರಿ ನಗರ ಕ್ಷೇತ್ರದಿಂದ ಕೆಆರ್‌ಪಿಪಿ ಅಭ್ಯರ್ಥಿ ಅರುಣಾಲಕ್ಷ್ಮೀ ಎಂದು ಘೋಷಣೆ ಯಾಗಿದೆ ಎಂದರು.ರಾಜ್ಯದಲ್ಲಿ ಸಾರ್ವಜನಿಕ ಜೀವನಕ್ಕೆ ಬಂದು ಹೊಸ ಪಕ್ಷವನ್ನು ಕಟ್ಟಿ ರಾಜಕಾರಣ ಆರಂಭಿಸಿದ ಬೆನ್ನಲ್ಲೇ ಕೆಲವರು ನನ್ನ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಆದರೆ, ನಾನ್ಯಾರಿಗೂ ಹೆದರುವದೂ ಇಲ್ಲ,
ರಾಜ್ಯ ರಾಜಕಾರಣದಲ್ಲಿ ನಾನು ಧೃಡ ಸಂಕಲ್ಪ ಮಾಡಿದ್ದೇನೆ. ಪ್ರಾಣ ಹೋದರೂ ಕೊಟ್ಟ ಮಾತನ್ನು ತಪ್ಪೊನ್ನಲ್ಲ ಈ ರೆಡ್ಡಿ. ಶಥಸಿದ್ದವಾಗಿ ನನ್ನ ಗುರಿಯನ್ನ ಮುಟ್ಟಿಯೇ ಮುಟ್ಟುತ್ತೆನೆ. ಅಂಜನಾದ್ರಿ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಬೃಹತ್ ಮೊತ್ತದ ಯೋಜನೆ ಸಿದ್ದಪಡಿಸಿದ್ದೇನೆ. ಇಡೀ ಜಗತ್ತೆ ನಮ್ಮ ಕಡೆ ನೋಡಬೇಕು ಹಾಗೇ ಮಾಡುತ್ತೀನಿ. ಗಂಗಾವತಿಯಲ್ಲಿ 200 ಹಾಸಿಗೆಗಳ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದೀಗ ಸಹೋದರನ ವಿರುದ್ದ ಪತ್ನಿಯನ್ನು ಜನಾರ್ದನ ರೆಡ್ಡಿ ಕಣಕ್ಕಿಳಿಸಿದ್ದು, ಜನರು ಯಾರ ಕೈ ಹಿಡಿದು ಗೆಲ್ಲಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ