Tuesday, November 28, 2023
spot_img
- Advertisement -spot_img

ದೇಶವನ್ನು ಒಡೆಯುವ ಶಕ್ತಿಗಳನ್ನು ಬೆಳೆಸುವ ಕೆಲಸ ಕಾಂಗ್ರೆಸ್ ಮಾಡಿದೆ : ಅರುಣ್ ಸಿಂಗ್ ವಾಗ್ದಾಳಿ

ಗದಗ: ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಸಂಪೂರ್ಣವಾಗಿ ಫೇಲ್ ಆಗಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ವಾಗ್ದಾಳಿ ಮಾಡಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ನಕ್ಸಲ್ ಸಮಸ್ಯೆ, ಜಮ್ಮು ಕಾಶ್ಮೀರದ ಉಗ್ರಗಾಮಿಗಳ ಸಮಸ್ಯೆ, ಗಡಿ ಸಮಸ್ಯೆ ಇರಬಹುದು. ಈ ಸಮಸ್ಯೆಗಳನ್ನು ಬುಡದಿಂದ ಬೆಳೆಯೋ ಕಾರ್ಯ ಮಾಡಿದ್ದು ಕಾಂಗ್ರೆಸ್ ಸರಕಾರ. ದೇಶವನ್ನು ಒಡೆಯುವ ಶಕ್ತಿಗಳನ್ನು ಬೆಳೆಸುವ ಕೆಲಸ ಕಾಂಗ್ರೆಸ್ ಸರಕಾರ ಮಾಡಿದೆ ಅಂತಾ ಜನರಿಗೆ ಗೊತ್ತಿದೆ. ಜನ ಬೆಂಬಲ‌ ಕಾಂಗ್ರೆಸ್​ಗೆ ಸಿಗಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಏಕತೆ, ಅಖಂಡತೆಯೊಂದಿಗೆ ಕಾಂಗ್ರೆಸ್ ಎಂದೂ ಇಲ್ಲ. ನೆಹರೂ ಕಾಲದಲ್ಲೇ ಕಾಶ್ಮೀರದಲ್ಲಿ ಪ್ರತ್ಯೇಕ ಸಂವಿಧಾನ, ಮೋದಿ ಆರ್ಟಿಕಲ್ 370 ಸಮಾಪ್ತಿ ಮಾಡಿದ್ರು. ಒಂದು ಕಡೆ ಕಾಂಗ್ರೆಸ್​ನವರು ದೇಶವನ್ನು ಒಡೆಯೋ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ 3 ಫೇಸ್ ದಿನದಲ್ಲಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಕಾಂಗ್ರೆಸ್ ಸರಕಾರ ಇರೋ ರಾಜಸ್ಥಾನದಲ್ಲಿ ರಾತ್ರಿ ಮಾತ್ರ ವಿದ್ಯುತ್ ಇರುತ್ತೆ. ದಿನದಲ್ಲಿ ಒಂದು ಗಂಟೆನೂ ಬರೋದಿಲ್ಲ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ, ಡಿಕೆಶಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ರಾಜ್ಯದ ಜನರಿಗೆ ಕಾಂಗ್ರೆಸ್ ಮೇಲಿನ ವಿಶ್ವಾಸ ಹೋಗಿದೆ ಎಂದು ಹರಿಹಾಯ್ದರು.

Related Articles

- Advertisement -spot_img

Latest Articles