ನವದೆಹಲಿ: ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಆಸಿಯಾನ್) ಸಭೆಯಲ್ಲಿ ಭಾಗವಹಿಸಲು ಗುರುವಾರ ಮುಂಜಾನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜಕಾರ್ತಾ ತಲುಪಿದ್ದಾರೆ.
‘ಆಸಿಯಾನ್ ಶೃಂಗಸಭೆಯ ಸಹ ಅಧ್ಯಕ್ಷರಾಗಿರುವುದು ನನಗೆ ಗೌರವ ಎಂದು ಹೇಳಿರುವ ಅವರು, ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ‘ನಮ್ಮ ಪಾಲುದಾರಿಕೆ ನಾಲ್ಕನೇ ದಶಕವನ್ನು ತಲುಪಿದೆ. ಈ ಶೃಂಗಸಭೆಯ ಸಹ-ಅಧ್ಯಕ್ಷತೆ ನನಗೆ ಗೌರವವಾಗಿದೆ. ಈ ಶೃಂಗಸಭೆ ಆಯೋಜಿಸಿರುವ ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ಅವರನ್ನು ನಾನು ಅಭಿನಂದಿಸಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.


‘ಉತ್ತಮ ಸಮಾಜ ನಿರ್ಮಿಸಲು ವಿವಿಧ ನಾಯಕರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಕಳೆದ ವರ್ಷ ನಾವು ಭಾರತ-ಆಸಿಯಾನ್ ಸ್ನೇಹ ದಿನ ಆಚರಿಸಿದ್ದೇವೆ; ಅದಕ್ಕಾಗಿ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ರೂಪ ನೀಡಿದ್ದೇವೆ’ ಎಂದು ಹೇಳಿದರು.
‘ಆಸಿಯಾನ್ ಜೊತೆಗಿನ ಒಪ್ಪಂದವು ಭಾರತದ ‘ಆಕ್ಟ್ ಈಸ್ಟ್’ ನೀತಿಯ ಪ್ರಮುಖ ಸ್ತಂಭವಾಗಿದೆ. ಈಗ ನಾಲ್ಕನೇ ದಶಕವನ್ನು ಪ್ರವೇಶಿಸಿರುವ ನಮ್ಮ ಪಾಲುದಾರಿಕೆಯ ಭವಿಷ್ಯದ ಬಾಹ್ಯರೇಖೆಗಳನ್ನು ಆಸಿಯಾನ್ ನಾಯಕರೊಂದಿಗೆ ಚರ್ಚಿಸಲು ನಾನು ಎದುರು ನೋಡುತ್ತಿದ್ದೇನೆ. ಆಸಿಯಾನ್ ಜೊತೆಗಿನ ಒಪ್ಪಂದವು ಭಾರತದ ‘ಆಕ್ಟ್ ಈಸ್ಟ್’ ನೀತಿಯ ಪ್ರಮುಖ ಆಧಾರಸ್ತಂಭವಾಗಿದೆ’ ಎಂದು ಅವರು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.