ಮಂಡ್ಯ: ಸ್ವಪಕ್ಷದವರೇ ಸಿದ್ದರಾಮಯ್ಯರ ಸೋಲನ್ನು ನೋಡಲು ಕಾದು ಕುಳಿತಿದ್ದಾರೆ ಎಂದು ಸಚಿವ ಅಶ್ವತ್ ನಾರಾಯಣ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸಿದ್ದರಾಮಯ್ಯ ರನ್ನು ಸೋಲಿಸಲು ಅವರ ಪಕ್ಷದಲ್ಲೇ ಹುನ್ನಾರ ನಡೆದಿದೆ ,ಯಾರು ಷಡ್ಯಂತರ ನಡೆಸಿದ್ದಾರೆಂಬುದರ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ಆದರೆ ಯಾರು ಕುತಂತ್ರ ನಡೆಸಿದ್ದಾರೆಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಸಿದ್ದರಾಮಯ್ಯ ಸೋಲುವುದನ್ನು ನೋಡಲು ಅವರ ಪಕ್ಷದವರು ಕಾದು ಕುಳಿತಿದ್ದಾರೆ ಎಂದು ತಿಳಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಅವರೇ ಘೋಷಿಸಿಕೊಂಡತೆ ಈ ಬಾರಿ ತಮ್ಮ ಕೊನೆ ಚುನಾವಾಣೆಯಾಗಿದ್ದು, ನನ್ನನ್ನು ಗೆಲ್ಲಿಸಿ ಎಂದು ತವರು ಕ್ಷೇತ್ರದ ಜನರಲ್ಲಿ ವಿನಂತಿಸಿಕೊಂಡಿದ್ದಾರೆ. ಇವರನ್ನು ಸೋಲಿಸಲು ವಿಪಕ್ಷಗಳು ರಣತಂತ್ರ ರೂಪಿಸುತ್ತಿವೆ ಎಂದರು.
ಅವರ ಸೋಲಿಗೆ ಬೇಕಾದ ತಯಾರಿ ಅವರ ನಾಯಕರೇ ಮಾಡುತ್ತಿದ್ದಾರೆ. ಅವರನ್ನು ಸೋಲಿಸಬೇಕು ಅಂತಿರೋದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ವರುಣಾ ಕ್ಷೇತ್ರದಲ್ಲಿ ಗೆಲ್ಲಲು ಸಿದ್ದರಾಮಯ್ಯ ವಾಸ್ತವ್ಯ ಬದಲಾಯಿಸಿ ರಣತಂತ್ರ ಹೆಣೆಯುತ್ತಿದ್ದಾರೆ ಎಂದು ಈ ವೇಳೆ ಹೇಳಿದರು.