Sunday, October 1, 2023
spot_img
- Advertisement -spot_img

ಬಿಜೆಪಿ ಸಂಸದನ ಮನೆಯಲ್ಲಿ ಬಾಲಕನ ಶವ ಪತ್ತೆ!

ಅಸ್ಸಾಂ : ಶನಿವಾರ ಸಂಜೆ ಇಲ್ಲಿನ ಸಿಲ್ಚಾರ್‌ನಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ರಾಜದೀಪ್ ರಾಯ್ ಅವರ ನಿವಾಸದಲ್ಲಿ 10 ವರ್ಷದ ಬಾಲಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ರಾಷ್ಟ್ರೀಯ ಸುದ್ದಿಸಂಸ್ಥೆಗಳು ವರದಿ ಪ್ರಕಟಿಸಿವೆ.

ಶವವನ್ನು ಪೊಲೀಸರು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಸಿಲ್ಚಾರ್ ಆಸ್ಪತ್ರೆಗೆ (SMCH) ಕಳುಹಿಸಿದ್ದಾರೆ ಎನ್ನಲಾಗಿದ್ದು, ಬಿಜೆಪಿ ಸಂಸದರ ಮನೆಯಲ್ಲಿ ಹಲವು ವರ್ಷಗಳಿಂದ ತನ್ನ ತಾಯಿ ಮತ್ತು ಅಕ್ಕನೊಂದಿಗೆ ಮೃತ ಬಾಲಕ ವಾಸಿಸುತ್ತಿದ್ದ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಇದನ್ನೂ ಓದಿ : ‘ಜಾತ್ಯಾತೀತ ಎಂದು ಹೇಳಿಕೊಳ್ಳುವ ಕೆಸಿಆರ್ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ’

ಕ್ಯಾಚಾರ್ ಜಿಲ್ಲೆಯ ಪಲೋಂಗ್ ಘಾಟ್ ಪ್ರದೇಶದಿಂದ ಬಂದಿರುವ ಬಾಲಕನ ತಾಯಿ ಸಂಸದ ರಾಜದೀಪ್ ರಾಯ್ ಅವರ ಮನೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಇಬ್ಬರು ಮಕ್ಕಳ ಶಿಕ್ಷಣಕ್ಕಾಗಿ ಅವರನ್ನು ಸಿಲ್ಚಾರ್‌ಗೆ ಕರೆತಂದಿದ್ದರು ಎಂದು ಕುಟುಂಬದ ಸದಸ್ಯರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಘಟನೆಯ ಗಮನಕ್ಕೆ ಬಂದ ತಕ್ಷಣ ಮನೆಗೆ ಧಾವಿಸಿದ ಸಂಸದ, (ಶವ ಪತ್ತೆಯಾದ ಕೋಣೆಯ) ಬಾಗಿಲು ಒಳಗಿನಿಂದ ಮುಚ್ಚಿತ್ತು ಮತ್ತು ಪೊಲೀಸರು ಅದನ್ನು ಮುರಿದು ತೆರೆದಾಗ, ಹುಡುಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದನು. ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ವೈದ್ಯರು ಅವನನ್ನು ಉಳಿಸಲು ಪ್ರಯತ್ನಿಸಿದ್ದರು. ಆದರೆ ಆತನು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನಿಗೀದನು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಸಂಸದ ರಾಯ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ ಇದೊಂದು ಆತ್ಮಹತ್ಯೆ ಎಂಬ ಅಂಶ ಹೊರಬಿದ್ದಿದ್ದು, ವೀಡಿಯೊ ಗೇಮ್ ಆಡಲು ಮೊಬೈಲ್ ಫೋನ್ ಸಿಗದಿದ್ದಕ್ಕಾಗಿ ತನ್ನ ತಾಯಿಯ ಮೇಲೆ ಬಾಲಕ ಕೋಪಗೊಂಡಿದ್ದನು ಎಂದು ಅವರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಲನ ತಾಯಿ ಮಗಳೊಂದಿಗೆ ದಿನಸಿ ಖರೀದಿಸಲು ಹೋಗಿದ್ದಳು ಮತ್ತು ಅದಕ್ಕೂ ಮೊದಲು, ಅವನು ಮೊಬೈಲ್ ಫೋನ್ ನೀಡುವಂತೆ ಬೇಡಿಕೆ ಇಟ್ಟಿದ್ದ. ಆದರೆ ಅವನ ತಾಯಿಯು ಮೊಬೈಲ್ ನೀಡಿರಲಿಲ್ಲ. ದಿನಸಿ ತರಲು ಹೋಗಿದ್ದ ಆತನ ತಾಯಿ ಕೋಣೆಯ ಬಾಗಿಲು ಒಳಗಿನಿಂದ ಮುಚ್ಚಿತ್ತು ಎಂದು ಸಾವಿನ ಕಾರಣದ ಕುರಿತು ಸಂಸದ ಅನುಮಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆಯ ಪ್ರಕರಣ ಎಂದು ಹೇಳುತ್ತಿದ್ದರೂ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ವಿಷಯವನ್ನು ಕೂಲಂಕುಷವಾಗಿ ತನಿಖೆ ಮಾಡುವಂತೆ ಮನವಿ ಮಾಡಿದ್ದಾಗಿ ರಾಯ್ ಹೇಳಿದ್ದಾರೆ.

ವಿದ್ಯಾವಂತನಾಗಿದ್ದ ಬಾಲಕನ ಕೈಬರಹ ಚೆನ್ನಾಗಿತ್ತು. ಆತನೊಂದಿಗೆ ಕೆಲವು ಬಾರಿ ನಾನು ಮಾತುಕತೆ ನಡೆಸಿ, ಅವನಲ್ಲಿಯ ಉತ್ತಮ ಜ್ಞಾನವನ್ನು ಅರಿತುಕೊಂಡಿದ್ದೇನೆ. ಈ ಸಾವು ನನಗೆ ವೈಯಕ್ತಿಕವಾಗಿ ನಷ್ಟವಾಗಿದೆ ಹಾಗೂ ನನ್ನ ಕುಟುಂಬವು ಇದರಿಂದ ಆಘಾತಕ್ಕೊಳಗಾಗಿದೆ ಎಂದು ರಾಜದೀಪ್ ರಾಯ್ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles