Friday, September 29, 2023
spot_img
- Advertisement -spot_img

ಚಂದ್ರಯಾನ-3: ವರಮಹಾಲಕ್ಷ್ಮಿ ಹಬ್ಬಕ್ಕೆ ದೊಡ್ಡ ಕೊಡುಗೆ ಎಂದ ಸ್ಪೀಕರ್ ಖಾದರ್

ಬೆಂಗಳೂರು: ಚಂದ್ರನ ದಕ್ಷಿಣ ದೃವದ ಮೇಲೆ ವಿಕ್ರಮ್ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡಿಗ್ ಮಾಡುವಲ್ಲಿ ಸಫಲವಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು (ISRO) ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅಭಿನಂದಿಸಿದ್ದಾರೆ. ಈ ಬಗ್ಗೆ ಸುದ್ದಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ವರಮಹಾಲಕ್ಷ್ಮಿ ಹಬ್ಬಕ್ಕೆ ಬಹುದೊಡ್ಡ ಕೊಡುಗೆ ಸಿಕ್ಕಿದೆ’ ಎಂದು ಹೇಳಿದ್ದಾರೆ.

ಇಸ್ರೋ ಕಚೇರಿಗೆ ಭೇಟಿ ನೀಡಿ ವಿಜ್ಞಾನಿಗಳ ಜತೆ ಮಾತನಾಡಿದ ಬಳಿಕ ಹೇಳಿಕೆ ನೀಡಿದ ಖಾದರ್, ‘ಭಾರತ ದೇಶಕ್ಕೆ ಇದೊಂದು ಐತಿಹಾಸಿಕ ದಿನ; ವರಮಹಾಲಕ್ಷ್ಮಿ ಹಬ್ಬಕ್ಕೆ ಬಹು ದೊಡ್ಡ ಕೊಡುಗೆ ಸಿಕ್ಕಿದೆ. ಇಸ್ರೋ ಸಂಸ್ಥೆಯ ಎಲ್ಲ ವಿಜ್ಞಾನಿಗಳಿಗೆ ಹಾಗೂ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಈ ಯಶಸ್ಸು ಭವಿಷ್ಯದ ತಲೆಮಾರಿಗೆ ಪ್ರಯೋಜನ ಆಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ; ಚಂದ್ರಯಾನ-3 ಯಶಸ್ವಿ : ಇಸ್ರೋ ತಂಡಕ್ಕೆ ವೀರೇಂದ್ರ ಹೆಗ್ಗಡೆ ಅಭಿನಂದನೆ

‘ಮುಂದಿನ ದಿನಗಳಲ್ಲಿ ಸಂಶೋಧನೆಗೆ ಚಂದ್ರಯಾನ-3 ಸಹಾಯಕಾರಿಯಾಗಿದೆ. ಯುವಕರಿಗೆ, ವಿದ್ಯಾರ್ಥಿಗಳಿಗೆ ಸಂಶೋಧನೆ ಸಂಬಂಧಪಟ್ಟಂತೆ ಬಹಳಷ್ಟು ಮಾಹಿತಿ ಸಿಗಲಿದೆ. ದೇಶದ ವಿಜ್ಞಾನಿಗಳು, ತಜ್ಞರು ವಿದೇಶಕ್ಕೆ ಹೋಗಲು ಪ್ರಯತ್ನ ಪಡೋದಿಲ್ಲ, ಇಲ್ಲೆ ಎಲ್ಲ ಸಂಶೋಧನೆ ಮಾಡ್ತಾರೆ. ಇಸ್ರೋ ಭವಿಷ್ಯದ ಆಲೋಚನೆ ಕನಸಿಗೆ ಯಶಸ್ಸು ಸಿಗಲಿ. ಇಸ್ರೋ ವಿಜ್ಞಾನಿಗಳಿಗೆ ವಿಧಾನಸೌಧದಲ್ಲಿ ಗೌರವ ಸಲ್ಲಿಸುವ ಬಗ್ಗೆ ಚರ್ಚೆ ನಡೆಸಲಾಗ್ತಿದೆ’ ಎಂದು ಖಾದರ್ ಮಾಹಿತಿ ನೀಡಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles