Friday, September 29, 2023
spot_img
- Advertisement -spot_img

ಅಥಣಿ ಜಿಲ್ಲೆ ಮಾಡುವಂತೆ ಸಿಎಂಗೆ ಒತ್ತಾಯಿಸುವೆ : ರಾಜು ಕಾಗೆ

ಚಿಕ್ಕೋಡಿ : ಭೌಗೋಳಿಕವಾಗಿ ಹೆಚ್ಚು ವಿಸ್ತಾರವನ್ನು ಹೊಂದಿದ ಹಾಗೂ ಜಿಲ್ಲಾ ಕೇಂದ್ರವಾಗಲು ಎಲ್ಲ ಅರ್ಹತೆಗಳನ್ನು ಪಡೆದಿರುವ ಅಥಣಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕೆಂದು ಕಾಗವಾಡ ಶಾಸಕ ರಾಜು ಕಾಗೆಯವರಿಗೆ ಅಥಣಿ ಜಿಲ್ಲಾ ಹೋರಾಟ ಸಮಿತಿಯ ವತಿಯಿಂದ ಇಂದು ಮನವಿ ಸಲ್ಲಿಸಲಾಗಿದೆ.

ಸಮರ್ಪಕವಾದ ಅಂಕಿ ಅಂಶಗಳೊಂದಿಗೆ ಸುದೀರ್ಘವಾದ ವಿವರಗಳನ್ನು ಒಳಗೊಂಡಿರುವ ಮನವಿಯಲ್ಲಿ ಚಿಕ್ಕೋಡಿ, ಹಾಗೂ ಗೋಕಾಕ ತಾಲ್ಲೂಕುಗಳಿಗಿಂತಲೂ ಈ ತಾಲೂಕು ಭೌಗೋಳಿಕವಾಗಿ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದೆ.

ಇದನ್ನೂ ಓದಿ : ಚೆಲುವರಾಯಸ್ವಾಮಿ ವಿರುದ್ಧ ನಕಲಿ ಪತ್ರ ಪ್ರಕರಣ; ಇಬ್ಬರನ್ನು ಬಂಧಿಸಿದ ಸಿಐಡಿ

ಜಿಲ್ಲಾ ಕೇಂದ್ರವಾಗಲು ಎಲ್ಲ ರೀತಿಯಿಂದಲೂ ಈ ತಾಲೂಕು ಅರ್ಹತೆಯನ್ನು ಹೊಂದಿರುವುದಾಗಿ ಹೋರಾಟಗಾರರು ಶಾಸಕರಿಗೆ ಮನವರಿಕೆ ಮಾಡಿದ್ದಾರೆ. ಅಥಣಿ ತಾಲೂಕು ಗ್ರಾಮಗಳ ಸಂಖ್ಯೆಯಲ್ಲಿಯೂ ಕೂಡ ಚಿಕ್ಕೋಡಿ ಹಾಗೂ ಗೋಕಾಕಗಿಂತ ಸುಮಾರು 25ಕ್ಕೂ ಹೆಚ್ಚು ಗ್ರಾಮಗಳನ್ನು ಹೊಂದಿದೆ.

ಪುರಸಭೆ, ಪಟ್ಟಣ ಪಂಚಾಯತ್, ಪೊಲೀಸ್ ಠಾಣೆ, ಪಡೀತರ ಅಂಗಡಿ ಸೇರಿದಂತೆ ಸರಕಾರಿ ಕಚೇರಿಗಳು ಸಂಘ ಸಂಸ್ಥೆಗಳ ವಿಷಯದಲ್ಲೂ ಈ ತಾಲ್ಲೂಕು ಹೆಚ್ಚು ವ್ಯಾಪ್ತಿಯ ಜೊತೆಗೆ ಗಡಿ ಭಾಗದಲ್ಲಿ ದೊಡ್ಡ ಪ್ರಮಾಣದ ವ್ಯಾಪಾರಿ ಕೇಂದ್ರವಾಗಿದೆ. ಅಲ್ಲದೆ ಜನಸಂಖ್ಯೆಯ ವಿಚಾರದಲ್ಲೂ ತಾಲೂಕು ಹಾಗೂ ಜಿಲ್ಲಾ ಕೇಂದ್ರವಾಗಲು ಸೂಕ್ತ ಎಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಕರ್ನಾಟಕ ಹಾಗೂ ಮಹಾರಾಷ್ಟ್ರದ ಬಹುದೊಡ್ಡ ಗಡಿ ಪ್ರದೇಶವಾಗಿರುವ ಇದು ವ್ಯಾಪಾರಿ ಕೇಂದ್ರವೆನಿಸಿದೆ. ಅದರೆ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಉತ್ತರಕ್ಕೆ 650 ಕಿಮೀ ಹಾಗೂ ಬೆಳಗಾವಿ ಜಿಲ್ಲಾ ಕೇಂದ್ರದಿಂದ 200 ಕಿಮೀ ದೂರದಲ್ಲಿರುವುದು ಈ ತಾಲೂಕಿನ ಪ್ರಾದೇಶಿಕ ಅಸಮಾನತೆಗೆ ಇನ್ನೊಂದು ದೊಡ್ಡ ಉದಾಹರಣೆಯಾಗಿದೆ.

ಇಡೀ ರಾಜ್ಯದಲ್ಲಿಯೇ ಎಲ್ಲ ತಾಲೂಕುಗಳ ಕೊನೆ ಹಳ್ಳಿಯಾದ ಅನಂತಪುರ, ತೆಲಸಂಗ, ಕೊಟ್ಟಲಗಿಯ ಜನರು ಜಿಲ್ಲಾ ಕೇಂದ್ರ ಬೆಳಗಾವಿಗೆ ಹೋಗಿ ಬರಲು 400 ಕಿಮೀ ಪ್ರಯಾಸದ ಪ್ರಯಾಣ ಮಾಡಬೇಕಾಗುತ್ತದೆ ಎಂದು ಶಾಸಕರ ಗಮನ ಸೆಳೆದರು.

ಇದಲ್ಲದೆ ಗಡಿ ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಈ ತಾಲೂಕು ಒಂದು ವೇಳೆ ಜಿಲ್ಲಾ ಕೇಂದ್ರವಾದರೆ ರಾಜ್ಯದ ನೆಲ,ಜಲ, ನಾಡು, ನುಡಿ ಹಾಗೂ ಸಂಸ್ಕೃತಿಯ ರಕ್ಷಣೆಗೆ ಹಾಗೂ ಬೆಳವಣಿಗೆಗೆ ಸಹಕಾರಿಯಾಗಲಿದೆ. ಆದ್ದರಿಂದ ಗಡಿ ಭಾಗದ ಅಥಣಿ ತಾಲೂಕನ್ನು ರಾಜ್ಯದ 32 ನೇ ಜಿಲ್ಲೆಯನ್ನಾಗಿ ರಚನೆ ಮಾಡಬೇಕೆಂದು ಶಾಸಕ ರಾಜು ಕಾಗೆಯವರಲ್ಲಿ ಹೋರಾಟ ಸಮಿತಿಯವರು ವಿನಂತಿಸಿದರು.

ಹೋರಾಟ ಸಮಿತಿ ಸದಸ್ಯರ ಮನವಿಗೆ ಸ್ಪಂದಿಸಿರುವ ಶಾಸಕ ಕಾಗೆ, ಹೋರಾಟಗಾರರು ನನ್ನ ಎದುರು ಪ್ರಸ್ತಾಪಿಸಿದ ಅಂಶಗಳು ಸೇರಿದಂತೆ ಎಲ್ಲ ಸ್ಥಾನ ಮಾನಗಳನ್ನು ಈ ತಾಲೂಕು ಹೊಂದಿದೆ. ಅಥಣಿ ಜಿಲ್ಲಾ ಕೇಂದ್ರವಾಗಲು ಎಲ್ಲ ಅರ್ಹತೆಗಳನ್ನು ಪಡೆದಿದೆ ಎಂದು ಮನವಿಗೆ ಪೂರಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅಲ್ಲದೆ ಈ ಕುರಿತು ಇಲ್ಲಿನ ಸ್ಥಳೀಯ ಶಾಸಕರಾದ ಲಕ್ಷ್ಮಣ ಸವದಿಯವರು ವಿದೇಶದ ಪ್ರವಾಸದಲ್ಲಿ ಇರುವುದರಿಂದ ಅವರು ತಾಲೂಕಿಗೆ ಮರಳಿದ ನಂತರ ಈ ಕುರಿತು ಚರ್ಚಿಸುವುದರ ಜೊತೆಗೆ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ನಾವಿಬ್ಬರು ಶಿಫಾರಸ್ಸು ಮಾಡುತ್ತೇವೆಂದು ರಾಜು ಕಾಗೆ ಹೋರಾಟಗಾರರಿಗೆ ಭರವಸೆ ನೀಡಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ  ಪುಟಗಳಾದ
Twitter – https://twitter.com/360_political
Facebook – https://www.facebook.com/Political360
Youtube – https://www.youtube.com/@Political360
Instagram – https://www.instagram.com/political_360/
ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles