ಹಾಸನ: ಹಾಸನ ಎಂದರೇ ಇವರ ಮನೆ ಆಸ್ತಿನಾ? ಇವರು ಒಂದು ಕ್ಷೇತ್ರದ ಸಮಸ್ಯೆ ಬಗೆಹರಿಸಲು ಆಗದವರು ಇನ್ನು ರಾಜ್ಯದ ಸಮಸ್ಯೆ ಹೇಗೆ ಬಗೆಹರಿಸುತ್ತಾರೆ? ಸತ್ಯ ಹೇಳಿದ್ರೆ ಇವರಿಗೆ ಸಿಟ್ಟು ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರ ಹೆಸರು ಹೇಳ್ಕೊಂಡು ರೈತರ ಅನ್ನಕ್ಕೆ ಮಣ್ಣು ಹಾಕೋ ಕೆಲಸ ಮಾಡ್ತಿದ್ದಾರೆ,ಹಾಸನದಲ್ಲಿ ಏನು ನಡೀತಿದೆ ಇದಕ್ಕೆ ಕಾರಣ ಯಾರು ಗೊತ್ತಿಲ್ವಾ? ಡಿಸಿಸಿ ಬ್ಯಾಂಕಲ್ಲಿ ರೈತರ ಹೆಸರಲ್ಲಿ ನಕಲಿ ಸಾಲ ಮಾಡಿಸಿದ್ರು. 40% ಪರ್ಸೇಂಟ್ ಸರ್ಕಾರ ಅಂತಾ ಬಿಜೆಪಿಗೆ ಹೆಸರಿದ್ರು, ಬಿಜೆಪಿಗೆ ಸೇರ್ಪಡೆ ಆಗಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿ, ಯಾವ ವ್ಯವಸ್ಥೆ ಸರಿ ಇದೆ ಹೇಳಿ? ದೆಹಲಿ ವರಿಷ್ಠರು ಹೇಳಿ ಕಳಿಸಿದ್ದಾರೆ. ವ್ಯವಸ್ಥೆ ಕೊಂಚ ಕೆಟ್ಟಿದೆ ಅದನ್ನ ಸರಿ ಮಾಡಿ ಎಂತಲೂ ಹೇಳಿದ್ದಾರೆ. ಹೀಗಾಗಿ ಸರಿ ಮಾಡಿಕೊಂಡು ಹೋಗೋ ಜವಾಬ್ದಾರಿ ಇದೆ ಎಂದರು.
ಅಂದಹಾಗೆ ಹಾಸನ ಜಿಲ್ಲೆಯ ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ಜೆಡಿಎಸ್ ತೊರೆದು ಬಿಜೆಪಿಗೆ ಇತ್ತೀಚೆಗೆ ಸೇರ್ಪಡೆಗೊಂಡರು. ಜೆಡಿಎಸ್ ವಿರುದ್ಧ ಅಸಮಾಧಾನಗೊಂಡಿದ್ದ ರಾಮಸ್ವಾಮಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.