Wednesday, November 29, 2023
spot_img
- Advertisement -spot_img

ಮಧ್ಯಪ್ರದೇಶ ಚುನಾವಣೆ; ಮರು ಸ್ಪರ್ಧಿಸಿರುವ ಶಾಸಕರ ಆಸ್ತಿಯಲ್ಲಿ ಶೇ.50 ರಷ್ಟು ಹೆಚ್ಚಳ

ನವದೆಹಲಿ: ಮಧ್ಯಪ್ರದೇಶದದಲ್ಲಿ 2018 ರಲ್ಲಿ 11.91 ಕೋಟಿ ರೂ.ಗಳಿದ್ದ 192 ಹಾಲಿ ಶಾಸಕರ ಆಸ್ತಿಯು ಇದೀಗ 17.81 ಕೋಟಿ ರೂ.ಗೆ ಅಂದರೆ ಸುಮಾರು ಶೇ.50 ರಷ್ಟು ಅಧಿಕವಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

ಕಳೆದ ಐದು ವರ್ಷ ಇಲ್ಲಿನ ವಿಧಾನಸಭೆಯ ಶಾಸಕ ಚೆತನ್ಯ ಕಶ್ಯಪ್ ಅವರ ಸರಾಸರಿ ಆಸ್ತಿ 91.45 ಕೋಟಿ ರೂ., ಸಂಜಯ್ ಶರ್ಮಾ ರೂ. 81.55 ಕೋಟಿ ಮತ್ತು ಸಂಜಯ್ ಶುಕ್ಲಾ 77.47 ಕೋಟಿ ರೂ. ಹೆಚ್ಚಳವಾಗಿದೆ.

ಇದನ್ನೂ ಓದಿ : ಸರ್ಕಾರಿ ಪರೀಕ್ಷೆ ಆಕ್ರಮ ತಡೆಗೆ ʼಕೆಇಎʼ ಹೊಸ ಪ್ಲಾನ್..!

ಈ ಬಗ್ಗೆ ಸಮೀಕ್ಷೆ ಕೈಗೊಂಡಿದ್ದ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಮಧ್ಯಪ್ರದೇಶ ಎಲೆಕ್ಷನ್ ವಾಚ್ ತಂಡ ಸಿದ್ಧಪಡಿಸಿದ ವರದಿಯು ವಿಧಾನಸಭಾ ಚುನಾವಣೆಯಲ್ಲಿ ಮರು ಸ್ಪರ್ಧಿಸುತ್ತಿರುವ 192 ಶಾಸಕರ ಸ್ವಯಂ ಆಸ್ತಿ ಘೋಷಣಾ ಪ್ರಮಾಣ ಪತ್ರಗಳಲ್ಲಿನ ಮಾಹಿತಿಯನ್ನು ಆಧರಿಸಿದೆ. ವರದಿಯ ಪ್ರಕಾರ ಬಿಜೆಪಿಯ ಚೆತನ್ಯ ಕಶ್ಯಪ್ (ರತ್ಲಾಮ್ ಸಿಟಿ ಕ್ಷೇತ್ರ) ಆಸ್ತಿಯಲ್ಲಿ ಗರಿಷ್ಠ 91.45 ಕೋಟಿ ಅಂದರೆ 2018 ರಲ್ಲಿ 204.63 ಕೋಟಿಯಿಂದ 2023 ರಲ್ಲಿ 296.08 ಕೋಟಿಗೆ ಏರಿಕೆಯಾಗಿದೆ.

ಅದೇ ರೀತಿ, ತೆಂಡುಖೇಡಾ ಕ್ಷೇತ್ರದ ಕಾಂಗ್ರೆಸ್‌ನ ಸಂಜಯ್ ಶರ್ಮಾ (ಸಂಜು ಭಯ್ಯಾ) ಅವರ ಆಸ್ತಿಯು 81.55 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ, 2018 ರಲ್ಲಿ 130.97 ಕೋಟಿ ರೂಪಾಯಿಗಳಿದ್ದ ಆಸ್ತಿಯು, 2023 ರಲ್ಲಿ 212.52 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಇಂದೋರ್-1 ಕ್ಷೇತ್ರದ ಕಾಂಗ್ರೆಸ್‌ನ ಶಾಸಕ ಸಂಜಯ್ ಶುಕ್ಲಾ ಅವರ ಆಸ್ತಿಯು 77.47 ಕೋಟಿ ರೂಪಾಯಿಗಳಷ್ಟು ಏರಿಕೆಯಾಗಿದೆ, 2018 ರಲ್ಲಿ 139.93 ಕೋಟಿ ರೂಪಾಯಿಗಳಿಂದ 2023 ರಲ್ಲಿ 217.41 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ.

ಮತ್ತೆ ಸ್ಪರ್ಧಿಸಿರುವ 192 ಶಾಸಕರ ಪೈಕಿ 100 ಮಂದಿ ಬಿಜೆಪಿಯವರೇ ಆಗಿದ್ದಾರೆ ಎಂಬ ಅಚ್ಚರಿಯ ಅಂಶವನ್ನು ವರದಿ ಬಯಲಿಗೆಳೆದಿದೆ. ಮರು ಸ್ಪರ್ಧಿಸುತ್ತಿರುವ 192 ಶಾಸಕರ ಪೈಕಿ 180 ಶಾಸಕರ (ಶೇ 94) ಆಸ್ತಿ ಶೇ. ಒಂದರಿಂದ 1982ಕ್ಕೆ ಏರಿಕೆಯಾಗಿದೆ, ಮತ್ತು 12 ಶಾಸಕರ (ಶೇ 6) ಆಸ್ತಿ ಕಡಿಮೆಯಾಗಿದೆ. ಶೇ. 64ರಷ್ಟು ಇಳಿಮುಖವಾಗಿದೆ. ಅಲ್ಲದೆ ಕಳೆದ 2018 ರಲ್ಲಿ ಸ್ವತಂತ್ರರು ಸೇರಿದಂತೆ ವಿವಿಧ ಪಕ್ಷಗಳಿಂದ ಕಣಕ್ಕಿಳಿದಿದ್ದ ಈ 192 ಮರು-ಸ್ಪರ್ಧಿ ಶಾಸಕರ ಸರಾಸರಿ ಆಸ್ತಿ 11.91 ಕೋಟಿ ರೂಪಾಯಿಗಳಾಗಿದ್ದು, 2023 ರಲ್ಲಿ 17.81 ಕೋಟಿ ರೂಪಾಯಿಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

2018 ಮತ್ತು 2023 ರ ವಿಧಾನಸಭಾ ಚುನಾವಣೆಗಳ ನಡುವೆ ಈ 192 ಮರು-ಸ್ಪರ್ಧಿ ಶಾಸಕರ ಸರಾಸರಿ ಆಸ್ತಿ ಬೆಳವಣಿಗೆಯು 5.90 ಕೋಟಿ ರೂಪಾಯಿ ಎಂದು ವರದಿ ಹೇಳಿದೆ. ಈ 192 ಮರು-ಸ್ಪರ್ಧಿ ಶಾಸಕರ ಆಸ್ತಿಯಲ್ಲಿ ಸರಾಸರಿ ಶೇಕಡಾವಾರು ಬೆಳವಣಿಗೆಯು ಶೇಕಡಾ 50 ರಷ್ಟಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ತೆಲಂಗಾಣ ಚುನಾವಣೆ 2023: ನ.17ಕ್ಕೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ!

2018ರಲ್ಲಿ ಬಿಜೆಪಿ ಶಾಸಕರ ಸರಾಸರಿ ಆಸ್ತಿ 11.65 ಕೋಟಿ ರೂ.ಗಳಷ್ಟಿದ್ದು, 2023ರಲ್ಲಿ 15.75 ಕೋಟಿ ರೂ.ಗೆ ಏರಿಕೆಯಾಗಿದ್ದು, ಶೇ.35.21ರಷ್ಟು ಹೆಚ್ಚಳವಾಗಿದ್ದು, ಕಾಂಗ್ರೆಸ್‌ನ 88 ಹಾಲಿ ಶಾಸಕರ ಪೈಕಿ 12.56 ಕೋಟಿ ರೂ., ಈಗ ಅದು 20.52 ಕೋಟಿ ರೂ.ಗಳಿಂದ ಶೇ.63.43ರಷ್ಟು ಬೆಳವಣಿಗೆಯನ್ನು ಕಂಡಿರುವುದು ತಿಳಿದಿದೆ.

2023 ರಲ್ಲಿ ಸ್ಪರ್ಧಿಸುವ ಇಬ್ಬರು ಬಿಎಸ್‌ಪಿ ಶಾಸಕರ ಸರಾಸರಿ ಆಸ್ತಿ 2018 ರಲ್ಲಿದ್ದ 4.32 ಕೋಟಿಯಿಂದ, 7.90 ಕೋಟಿ ರೂ.ಗೆ ಏರಿಕೆಯಾಗಿದೆ, ಇದು ಶೇ. 82.57 ರಷ್ಟು ಏರಿಕೆಯಾಗಿದೆ, ಆದರೆ ಮರು ಸ್ಪರ್ಧಿಸುತ್ತಿರುವ ಸ್ವತಂತ್ರ ಶಾಸಕರ ಸರಾಸರಿ ಆಸ್ತಿಯು ಶೇ.182.64 ರಷ್ಟು ಏರಿಕೆ ಕಂಡಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಅವರ ಆಸ್ತಿ 7.93 ಕೋಟಿ ರೂ.ಗಳಾಗಿದ್ದು, ಈಗ 22.42 ಕೋಟಿ ರೂ.ಗಳಷ್ಟಾಗಿದೆ. ವಿಂಧ್ಯ ಜನತಾ ಪಕ್ಷದ ನಾರಾಯಣ ತ್ರಿಪಾಠಿಯಿಂದ ಮರು ಸ್ಪರ್ಧಿಸುತ್ತಿರುವ ಶಾಸಕರಲ್ಲಿ ಒಬ್ಬರ ಸರಾಸರಿ ಆಸ್ತಿಯು ಶೇಕಡಾ ಮೂರರಷ್ಟು ಕುಸಿತವನ್ನು ಕಂಡಿದ್ಧು, 2018 ರ ವಿಧಾನಸಭಾ ಚುನಾವಣೆಯಲ್ಲಿ ಅವರ ಆಸ್ತಿ 89.12 ಲಕ್ಷ ರೂಪಾಯಿಗಳಷ್ಟಿತ್ತು, ಅದು ಈಗ 2023 ರಲ್ಲಿ 86.09 ಲಕ್ಷ ರೂಪಾಯಿಯಾಗಿದೆ ಎಂದು ವರದಿಯಲ್ಲಿ ಬಹಿರಂಗಗೊಂಡಿದೆ.

ಬಡತನ ಹಾಗೂ ಸಾರ್ವಜನಿಕರ ಸ್ವಾಭಿಮಾನ ಹಾಗೂ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿ ಪಕ್ಷದ ಶಾಸಕರ ಆಸ್ತಿಯಲ್ಲಿ ಗಮನಾರ್ಹ ಏರಿಕೆ ಕಂಡಿದ್ದು ನಿಜಕ್ಕೂ ಎಲ್ಲರನ್ನೂ ದಂಗು ಬಡಿಸಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles