ಬೆಂಗಳೂರು : ಆಯನೂರು ಮಂಜುನಾಥ್ ಬಿಜೆಪಿ ತೊರೆದಿದ್ದು, ಜೆಡಿಎಸ್ ಸೇರಲಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕು ಮಾರಸ್ವಾಮಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಶಿವಮೊಗ್ಗ ನಗರದಿಂದ ಆಯನೂರು ಮಂಜುನಾಥ್ ಜೆಡಿಎಸ್‌ನಿಂದ ಕಣಕ್ಕಿಳಿಯಲಿದ್ದಾರೆ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಜೊತೆಗೆ ಮಾತುಕತೆ ನಡೆದಿದೆ, ಜೆಡಿಎಸ್ ನಿಂದ ಸ್ಪರ್ಧಿಸೋದಾಗಿ ಇಂದು ಘೋಷಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇನ್ನೂ 70 ಅಭ್ಯರ್ಥಿಗಳ ಪಟ್ಟಿ ಇಂದೇ ಬಿಡುಗಡೆ ಆಗಲಿದೆ, ಜೆಡಿಎಸ್ ಕಚೇರಿಯಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು, ಆಯನೂರು ಮಂಜುನಾಥ್ ಜೆಡಿಎಸ್ ಸೇರುವ ಬಗ್ಗೆ 6-7 ತಿಂಗಳಿನಿಂದ ಮಾತುಕತೆ ನಡೆಯುತ್ತಲೇ ಇತ್ತು , ಇಂದು ಮಧ್ಯಾಹ್ನ ಜೆಡಿಎಸ್ ನಾಯಕ ಹೆಚ್ ಡಿಕೆ ಅವರನ್ನು ಭೇಟಿ ಯಾಗಿ ಆಯನೂರು ಮಂಜುನಾಥ್ ಬಿ ಫಾರಂ ಪಡೆಯಲಿದ್ದಾರೆ ಎನ್ನಲಾಗಿದೆ.
ಇನ್ನೂ ಹಾಸನದಲ್ಲಿ ಪ್ರಚಾರ ಬಗ್ಗೆ ಪ್ರತಿಕ್ರಿಯಿಸಿ, ವರಿಷ್ಠ ದೇವೇಗೌಡರು ಕೆಲವೊಂದು ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದು, ನಾಳೆ ಹಾಸನದಲ್ಲಿ ನಾನು ಸ್ವರೂಪ್ ಪರ ಪ್ರಚಾರ ಮಾಡಲಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.