ಶಿವಮೊಗ್ಗ: ಈಶ್ವರಪ್ಪರ ನಿಯಂತ್ರಣವಿಲ್ಲದ ಮಾತು, ಪುತ್ರ ವ್ಯಾಮೋಹದ ಎರಡು ಶತ್ರುಗಳಿಂದ ಚುನಾವಣಾ ರಾಜಕೀಯದಿಂದ ದೂರ ಹೋಗುವಂತಾಯಿತು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ,ಈಶ್ವರಪ್ಪ ಅವರಿಗೆ ವ್ಯಕ್ತಿಗತವಾಗಿ ಯಾರು ಶತ್ರುಗಳಿರಲಿಲ್ಲ, ಅವರಿಗೆ ಕೇವಲ ಎರಡು ಶತ್ರುಗಳು ಮಾತ್ರ ಇದ್ದಿದ್ದು, ಅದು ನಿಯಂತ್ರಣವಿಲ್ಲದ ಮಾತು ಮತ್ತು ಪುತ್ರವ್ಯಾಮೋಹ ಎಂದರು.
ಈಶ್ವರಪ್ಪ ತನ್ನದಲ್ಲದ ತಪ್ಪಿಗೆ ರ್ಗಮಿಸುತ್ತಿದ್ದಾರೆ, ಅವರಿಗೆ ಒಳ್ಳೆಯದಾಗಲಿ, ನಾನು ಈಗಲೂ ವಿಧಾನಸಭೆ ಸ್ಪರ್ಧೆ ಆಕಾಂಕ್ಷಿಯಾಗಿದ್ದೇನೆ. ನನಗೆ ಶಿವಮೊಗ್ಗ ಕ್ಷೇತ್ರದ ಟಿಕೆಟ್ ಸಿಗುವ ನಿರೀಕ್ಷೆ ಇದೆ. ನನ್ನ ಈ ಮಾತಿನಿಂದ ಯಾವುದೇ ಬದಲಾವಣೆ ಇಲ್ಲ, ಶಿವಮೊಗ್ಗ ಕ್ಷೇತ್ರದಲ್ಲಿ ಯಾವ ಪಕ್ಷವೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಇನ್ನೂ ಎರಡು ಮೂರು ದಿನದಲ್ಲಿ ಎಲ್ಲವೂ ನಿರ್ಧಾರವಾಗಲಿದೆ.
ಅಷ್ಟೇ ಅಲ್ಲದೇ ಆಯನೂರು ಮಂಜುನಾಥ್ ಈಶ್ವರಪ್ಪ ತಮ್ಮ ಮಗನಿಗೆ ಟಿಕೆಟ್ ಕೇಳಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ ವಂಶ ರಾಜಕಾರಣವನ್ನು ಮುಂದುವರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದರು