ನವದೆಹಲಿ: ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಹಿನ್ನೆಲೆ ದೇಶದಾದ್ಯಂತ ‘ಆಯುಷ್ಮಾನ್ ಭವ’ ಅಭಿಯಾನ ನಡೆಸಲಾಗುವುದು ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಈ ವರ್ಷ ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಾವು ಸೆಪ್ಟೆಂಬರ್ 17 ರಿಂದ ‘ಆಯುಷ್ಮಾನ್ ಭವ’ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುತ್ತೇವೆ. ‘ಆಯುಷ್ಮಾನ್ ಭವ’ ಒಂದು ಆರೋಗ್ಯ ಸಂಬಂಧಿ ಅಭಿಯಾನವಾಗಿದೆ. ಪ್ರಧಾನಿ ಮೋದಿ ಅವರು 60 ಕೋಟಿ ಜನರಿಗೆ 5 ಲಕ್ಷ ಮೌಲ್ಯದ ಉಚಿತ ವೈದ್ಯಕೀಯ ಸಹಾಯವನ್ನು ಖಾತರಿಪಡಿಸಿದ್ದಾರೆ. ಅವರು ಶೋಷಿತ ಮತ್ತು ವಂಚಿತ ಜನಸಂಖ್ಯೆಯ ಅನುಕೂಲಕ್ಕಾಗಿ ಮತ್ತು ‘ಆಯುಷ್ಮಾನ್ ಭಾರತ್’ ಯೋಜನೆ ಅಡಿಯಲ್ಲಿ ಮಹಿಳೆಯರಿಗಾಗಿ ಕೆಲಸ ಮಾಡಿದ್ದಾರೆ. ಆದ್ದರಿಂದ ನಾವು ಸೆಪ್ಟೆಂಬರ್ 17 ರಿಂದ ‘ಆಯುಷ್ಮಾನ್ ಭವ’ ನಡೆಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ನೆದರ್ ಲ್ಯಾಂಡ್ ಪ್ರಧಾನಿ ಸ್ವಾಗತಿಸಿದ ಡಿಕೆ ಶಿವಕುಮಾರ್
‘ಆಯುಷ್ಮಾನ್ ಭಾರತ್’ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಜಾರಿಗೊಳಿಸಿದ ಕೇಂದ್ರದ ಪ್ರಮುಖ ಯೋಜನೆಯಾಗಿದ್ದು, ದ್ವಿತೀಯ ಮತ್ತು ತೃತೀಯ ಆರೈಕೆ ಆಸ್ಪತ್ರೆಗೆ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 1 ಲಕ್ಷ ರೂಪಾಯಿ ಆರೋಗ್ಯ ರಕ್ಷಣೆ ನೀಡುತ್ತದೆ. 60,000 ಜನರಿಗೆ ನಾವು ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ನೀಡುತ್ತೇವೆ. ಮುಂಬರುವ ದಿನಗಳಲ್ಲಿ ಆರೋಗ್ಯ ಸೇವೆಗಳು ಮತ್ತು ಕಾರ್ಯಕ್ರಮಗಳ ಹೆಚ್ಚಾಗಿ ನಡೆಸುತ್ತೇವೆ ಎಂದು ಮಾಂಡವಿಯ ಹೇಳಿದರು.
ಏನಿದು ‘ಆಯುಷ್ಮಾನ್ ಭವ’ ಅಭಿಯಾನ?
‘ಆಯುಷ್ಮಾನ್ ಭವ’ ಸಾರ್ವಜನಿಕ ಆರೋಗ್ಯ ಅಭಿಯಾನವಾಗಿದ್ದು, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಜನರಿಗಾಗಿ ಸೆಪ್ಟೆಂಬರ್ 17 ರಂದು ಭಾರತದಾದ್ಯಂತ ಪ್ರಾರಂಭಿಸಲಾಗುವುದು. ಅಭಿಯಾನವು ಮೂರು ಪ್ರಮುಖ ಅಂಶಗಳನ್ನು ಒಳಗೊಂಡಿದೆ–ಆಯುಷ್ಮಾನ್ ಆಪ್ ಕೆ ದ್ವಾರ್ 3.0, ಆಯುಷ್ಮಾನ್ ಮೇಳ ಮತ್ತು ಆಯುಷ್ಮಾನ್ ಸಭಾ. ಈ ಕಾರ್ಯಕ್ರಮವು ಆರೋಗ್ಯ ರಕ್ಷಣೆಯ ಲಭ್ಯತೆಯನ್ನು ಹೆಚ್ಚಿಸಲು ಮತ್ತು ರಾಷ್ಟ್ರದಾದ್ಯಂತ ಆರೋಗ್ಯ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.