ಮಾನ್ವಿ : ಮುಂಬರುವ 2023ರ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಠನೆ ನೀಡಿದರು. ಶಾಸಕ ರಾಜಾ ವೆಂಕಟಪ್ಪ ನಾಯಕ ಸಹೋದರ ರಾಜಾ ರಾಮಚಂದ್ರ ನಾಯಕರ ಮದುವೆ ಆರತಕ್ಷತೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸುದ್ದಿಗಾರರ ಜೊತೆ ಮಾತನಾಡಿದರು.
ಜೆಡಿಎಸ್ ಅಭ್ಯರ್ಥಿ ಯಾರು ಹಾಗೂ ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದನ್ನು ಜನರು ತೀರ್ಮಾನಿಸುತ್ತಾರೆ. ಯಾರಿಗೆ ಬಿ ಫಾರ್ಮ್ ನೀಡಬೇಕು ಎಂದು ನಾನು ನಿರ್ಧರಿಸುತ್ತೇನೆ ಎಂದರು. ಜೆಡಿಎಸ್ ಬಿ ಫಾರ್ಮ್ ಕೊಡುವರು ಯಾರು?, ಬಿ ಫಾರ್ಮ್ ಕೊಡುವುದು ನಾನು, ನಿಖಿಲ್ ಕುಮಾರಸ್ವಾಮಿ ಇಚ್ಛೆಯಂತೆ ಮಂಡ್ಯ, ಕನಕಪುರದಲ್ಲಿ ನಿಲ್ಲುತ್ತಾನೋ ಇಲ್ಲವೊ ಎನ್ನುವ ಉಹಾಪೋಹಾಗಳಿಗೆ ನಾನು ಏನು ಹೇಳಲಿ ಎಂದರು.
ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ವಿಚಾರ ಸಚಿವ ಅಶ್ವತ್ ನಾರಾಯಣ ರಾಮಮಂದಿರ ನಿರ್ಮಾಣದ ಬಗ್ಗೆ ಸಾಕಷ್ಟುಚರ್ಚೆ ನಡೆದಿದೆ. ಅಶ್ವತ್ ನಾರಾಯಣಗೂ, ರಾಮಮಂದಿರಕ್ಕೂ ಏನು ಸಂಬಂಧ? ಎಂದರು.
ಸ್ಥಳೀಯ ಶಾಸಕ ಆರ್.ಮಂಜುನಾಥ್ ಮಾತನಾಡಿ, ಪ್ರಧಾನಿಯಾಗಿ ಎಚ್.ಡಿ.ದೇವೇಗೌಡರು ಮತ್ತು ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿದ ಸಾಧನೆಗಳು ಹಾಗೂ 2023 ಚುನಾವಣೆಯ ಪ್ರಣಾಳಿಕೆ ತಿಳಿಸಲು ಜೆಡಿಎಸ್ ಪಕ್ಷದಿಂದ ‘ರಾಜ್ಯಕ್ಕೆ ಕುಮಾರಣ್ಣ ದಾಸರಹಳ್ಳಿಗೆ ಮಂಜಣ್ಣ’ ಕಾರ್ಯಕ್ರಮದಲ್ಲಿ ಕ್ಷೇತ್ರದಾದ್ಯಂತ ಮನೆ ಮನೆಗೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.