Saturday, June 10, 2023
spot_img
- Advertisement -spot_img

ಕೆಲವೇ ದಿನಗಳಲ್ಲಿ ಕಾಂಗ್ರೆಸ್​ನ ನಿಜವಾದ ಮುಖ ಬಯಲಾಗಿದೆ : ಬಿ.ವೈ.ವಿಜಯೇಂದ್ರ

ಬೆಂಗಳೂರು: ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್​ನ ನಿಜವಾದ ಮುಖ ಬಯಲಾಗಿದೆ ಎಂದು ಶಿಕಾರಿಪುರದ ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಅಧಿಕಾರದ ಲಾಭಕ್ಕಾಗಿ ಲಿಂಗಾಯತ ಹೆಸರನ್ನು ಪಾದಪೀಠವಾಗಿಸಿಕೊಂಡ ಕಾಂಗ್ರೆಸ್​ನ ಧೀಮಂತ ನಾಯಕರು ಲಿಂಗಾಯತರಿಗೆ ಸಿಎಂ ಅಥವಾ ಡಿಸಿಎಂ ನೀಡಿ ಎಂಬ ಮಾತು ಕೇಳಿಬಂದಾಗ ಮೌನವಾಗಿದ್ದಾರೆ.ಅಣ್ಣ ಬಸವಣ್ಣ ಮತ್ತು ಅವರ ಬೋಧನೆಗಳನ್ನು ನಿಜವಾಗಿಯೂ ಪ್ರತಿನಿಧಿಸುವುದು ಬಿಜೆಪಿ ಮಾತ್ರ. ಬಸವಣ್ಣನವರ ತತ್ತ್ವವನ್ನು ಅನುಸರಿಸುವ ಮೂಲಕ ಎಲ್ಲರಿಗೂ ನ್ಯಾಯವನ್ನು ಒದಗಿಸುತ್ತಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ನಿಂದ ಗರಿಷ್ಟ 39 ಶಾಸಕರನ್ನು ಗೆದ್ದ ನಂತರವೂ ಲಿಂಗಾಯತರಿಗೆ ಸರಿಯಾದ ಬೇಡಿಕೆಯ ಯಾವುದೇ ಬಲವಾದ ಧ್ವನಿಯಿಲ್ಲದಂತಾಗಿದೆ, ಲಿಂಗಾಯತರನ್ನು ಹೀನಾಯವಾಗಿ ನಡೆಸಿಕೊಳ್ತಿರೋ ಕೈ ಪಕ್ಷದಿಂದ ಸಮಾಜಕ್ಕೆ ನಿಜವಾದ ನ್ಯಾಯ ಕೊಡಲು ಸಾಧ್ಯವೇ ಎಂದಿದ್ದಾರೆ. ಕರ್ನಾಟಕದ ನಾಗರಿಕರು ಕಾಂಗ್ರೆಸ್ ನ ಸುಳ್ಳಿಗೆ ಬೀಳುವ ತಮ್ಮ ಮೂರ್ಖತನವನ್ನು ಶೀಘ್ರದಲ್ಲೇ ಅರಿತುಕೊಳ್ಳುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

Related Articles

- Advertisement -spot_img

Latest Articles