Sunday, March 26, 2023
spot_img
- Advertisement -spot_img

100 ವರ್ಷ ಅಲ್ಲ, ಸಾವಿರ ವರ್ಷವಾದರೂ ರಾಮ ಮಂದಿರ ಕೆಡವಿ ಬಾಬರ್ ಮಸೀದಿ ಕಟ್ಟಲು ನಿಮ್ಮಿಂದ ಸಾಧ್ಯವಿಲ್ಲ

ಧಾರವಾಡ: ರಾಮ ಮಂದಿರ ಕೆಡವಿ ಬಾಬರ್ ಮಸೀದಿ ಕಟ್ಟಲು ನಿಮ್ಮಪ್ಪನಿಂದಲೂ ಸಾಧ್ಯವಿಲ್ಲ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರವನ್ನು ಕೆಡವಿ ಬಾಬರ್ ಮಸೀದಿ ಕಟ್ಟುತ್ತೇವೆ ಎಂದು ಹೇಳಿಕೆ ಕೊಟ್ಟಿರುವ ಇಮಾಮ್ ಅಸೋಸಿಯೇಶನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.

50-100 ವರ್ಷ ಆದ ಮೇಲೆ ನಮ್ಮ ದೊರೆ ಬರುತ್ತಾನೆ. ಆಗ ರಾಮ ಮಂದಿರ ಕೆಡವಿ ಮತ್ತೆ ಬಾಬರ್ ಮಸೀದಿ ಕಟ್ಟುತ್ತೇವೆ ಎಂದು ರಶೀದಿ ಹೇಳಿಕೆ ನೀಡಿದ್ದಾರೆ. ಇನ್ನು 100 ವರ್ಷ ಅಲ್ಲ, ಸಾವಿರ ವರ್ಷವಾದರೂ ನಿಮ್ಮಿಂದ ಸಾಧ್ಯವಿಲ್ಲ ಎಂದು ಆಕ್ರೋಶಿಸಿದ್ದಾರೆ.

ಈ ದೇಶದ ಮುಸ್ಲಿಮರಿಗೆ ಬಾಬರ್ ಯಾವುದೇ ಸಂಬಂಧ ಇಲ್ಲದಿದ್ದರೂ ಇಸ್ಲಾಂ ಪ್ರತಿಷ್ಠಾಪನೆಯ ಮೂಲ ಉದ್ದೇಶ ಹೊಂದಿದ್ದಾರೆ. ಇದು ಮೌಲಾನಾ ರಶೀದಿ ಬಾಯಿಂದ ಹೊರ ಬಂದಿದೆ ಎಂದು ಕಿಡಿ ಕಾರಿದ್ದಾರೆ. ಈ ದೇಶದ ಹಿಂದೂಗಳು ಜಾಗೃತಗೊಂಡಿದ್ದಾರೆ. ಭಜರಂಗದಳ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಶ್ರೀರಾಮ ಸೇನೆ ಕೆಲಸ ಮಾಡುತ್ತಿವೆ. ನಿಮ್ಮ ಸೊಕ್ಕು ಅಡಗಿಸಲು ನಾವು ಸಿದ್ಧರಿದ್ದೇವೆ ಎಂದಿದ್ದಾರೆ.

Related Articles

- Advertisement -

Latest Articles