Thursday, June 8, 2023
spot_img
- Advertisement -spot_img

ಅಂಬಾರಿ ಹೊತ್ತಿದ್ದ ಬಲರಾಮ ಇನ್ನಿಲ್ಲ : ನರೇಂದ್ರ ಮೋದಿ ಸಂತಾಪ

ಮೈಸೂರು: ಮೈಸೂರು ದಸರಾದಲ್ಲಿ 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಇನ್ನಿಲ್ಲ, ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಹಲವು ವರ್ಷಗಳಿಂದ, ಗಜರಾಜ ಬಲರಾಮ ಮೈಸೂರಿನ ಸಾಂಪ್ರದಾಯಿಕ ದಸರಾ ಆಚರಣೆಯ ಪ್ರಮುಖ ಭಾಗವಾಗಿದ್ದನು. ಅವನು ಚಾಮುಂಡೇಶ್ವರಿ ಮಾತೆಯ ಮೂರ್ತಿಯನ್ನು ಹೊತ್ತಿದ್ದನ್ನು ಜನರು ನೆನಪಿಸಿಕೊಳ್ಳುತ್ತಾರೆ. ಅವನು ಅಸಂಖ್ಯಾತ ಜನರಿಗೆ ಪ್ರೀತಿಪಾತ್ರನಾಗಿದ್ದನು. ಅವನ ಅಗಲಿಕೆಯಿಂದ ದುಃಖವಾಗಿದೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

ಆನೆಯ ಗಂಟಲಿನಲ್ಲಿ ಹುಣ್ಣಾಗಿದ್ದು, ಆಹಾರ ನಿರಾಕರಿಸುತ್ತಿತ್ತು, ಇದರಿಂದ ನಿತ್ರಾಗೊಂಡಿದೆ ಎಂದು ಹೇಳಲಾಗಿದೆ, ಅನಾರೋಗ್ಯದಿಂದ ಅಸುನೀಗಿದ ಬಲರಾಮ ಆನೆಯ ಅಂತ್ಯಕ್ರಿಯೆ ಇಂದು ನೆರವೇರಿತು. ನಾಗರಹೊಳೆ ಹುಲಿ ಅಭಯಾರಣ್ಯರಲ್ಲಿ ಬಲರಾಮದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

Related Articles

- Advertisement -spot_img

Latest Articles