ಬೆಂಗಳೂರು: ನಾಳೆ ಸಾರ್ವಜನಿಕರಿಗೆ ತೊಂದರೆಯಾಗಲ್ಲ, 500 ಬಸ್ ಹಾಗೂ 4 ಸಾವಿರ ಟ್ರಿಪ್ ಮಾಡಲು ಬಿಎಂಟಿಸಿಗೆ ಸೂಚಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ನಾಳೆ ಖಾಸಗಿ ಸಾರಿಗೆ ಒಕ್ಕೂಟಗಳು ಬೆಂಗಳೂರು ಬಂದ್‌ಗೆ ಕರೆ ಕೊಟ್ಟ ಬೆನ್ನಲ್ಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಹಿಂದೆ ಎರಡು ಬಾರಿ ಖಾಸಗಿ ಸಾರಿಗೆ ಒಕ್ಕೂಟದ ಜೊತೆ ಚರ್ಚೆ ಮಾಡಿದ್ದೇನೆ. ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿಸುವ ಅವಕಾಶ ಕಲ್ಪಿಸಿದ್ದೆ. ಬಂದ್ ಮಾಡಲು ಚರ್ಚೆ ಮಾಡಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಬಿಎಂಟಿಸಿ ಎಂಡಿಗೆ ತಿಳಿಸಿದ್ದೆನೆ. ನಾಳೆ ಸುಮಾರು 500 ಬಸ್ 4 ಸಾವಿರ ಟ್ರಿಪ್ ಮಾಡಲು ತಿಳಿಸಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ‘ಸೋತ ಜಾಗದಲ್ಲೇ ಪಕ್ಷದ ಬಾವುಟ ಹಾರಿಸುವ ಕೆಲಸ ಮಾಡ್ತೇನೆ’
ಖಾಸಗಿ ಅವರು ತಿಂಗಳಿಗೆ 10 ಸಾವಿರ ಸಹಾಯ ಧನ ಕೇಳಿದ್ದಾರೆ. ಹಣಕಾಸು ವಿಚಾರ ಮುಖ್ಯ ಮಂತ್ರಿಗಳೇ ಮಾತನಾಡಬೇಕು. ಲೈಫ್ ಟೈಮ್ ಟ್ಯಾಕ್ಸ್ ಕುರಿತಂತೆಯೂ ಚರ್ಚೆಯಾಗಬೇಕು. ಇದನ್ನು ಬಿಟ್ಟು ಉಳಿದವೆಲ್ಲಾ ಹಳೆಯ ಬೇಡಿಕೆಗಳೇ ಆಗಿವೆ. ಆಟೋ ಚಾಲಕರ ಬೇಡಿಕೆ ಈಡೇರಿಸಲು ಸುಮಾರು 5 ಸಾವಿರ ಕೋಟಿ ಹಣ ಬೇಕು. ಹಣಕಾಸಿನ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.