ವಿಜಯಪುರ: ಹಲಾಲ್ ವಿಚಾರದಲ್ಲಿ ಬಿಜೆಪಿ ಸರ್ಕಾರ ಕಮಿಷನ್ ಮಾಡುತ್ತಿದೆ. ಹಲಾಲ್ ಕಟ್ ಮಾಡಿ ತಮ್ಮ ಕಮಿಷನ್ ಮಾಡಿಕೊಳ್ಳುತ್ತಿದೆ. ಬಿಜೆಪಿ ಸರ್ಕಾರದ ಕಮಿಷನ್ ಬಗ್ಗೆ ವೀಡಿಯೋಗಳಿವೆ ಎಂದು ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಮುಸ್ಲಿಮರ ಗಡ್ಡ, ಊಟ, ಟೋಪಿಗೆ ತೊಂದರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಬರೀ ಬಿಜೆಪಿ ಮಾತಿನಲ್ಲೇ ಇದೆ. ಬಿಜೆಪಿ ಮುಸ್ಲಿಮರ ವಿರುದ್ಧ ಇದೆ ಎಂದರು. ಇನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಕಿಡಿಕಾರಿದ ಓವೈಸಿ, ನಾವು ಪಾಕಿಸ್ತಾನದ ಹೆಸರು ಕೂಡ ಹೇಳುವುದಿಲ್ಲ. ಆದರೆ ಶಾಸಕ ಯತ್ನಾಳ್ ಪದೇಪದೆ ಪಾಕಿಸ್ತಾನದ ಹೆಸರು ಉಲ್ಲೇಖ ಮಾಡುತ್ತಾರೆ. ಪಾಕಿಸ್ತಾನ ಮೇಲೆ ಅವರಿಗೆ ಪ್ರೀತಿ ಇದೆ. ಪಾಕಿಸ್ತಾನ ಮೇಲೆ ಪ್ರೀತಿ ಯಾಕೆ ಇದೆ ಎಂಬುದು ಅವರಿಗೆ ಗೊತ್ತು, ನನಗೆ ಗೊತ್ತಿಲ್ಲ. ಪ್ರಧಾನಿ ಮೋದಿ ಯತ್ನಾಳ್‌ಗೆ ಹೇಳಿಕೊಟ್ಟಿರಬಹುದು. ಪದೇಪದೆ ಪಾಕಿಸ್ತಾನ ಹೆಸರು ಹೇಳು ಎಂದು ಪ್ರಧಾನಿ ಹೇಳಿದ್ದಕ್ಕೆ ಯತ್ನಾಳ್ ಹೇಳ್ತಿದ್ದಾರೆ ಎಂದರು. ಇನ್ನು ಹಿಜಾಬ್ ಕುರಿತು ಸುಪ್ರೀಂ ಕೋರ್ಟ್ ತೀರ್ಪು ವಿಚಾರವಾಗಿ ಮಾತನಾಡಿ, ಹಿಜಬ್ ಪರ ತೀರ್ಪು ಬಂದಿದ್ದು ಸಂತಸ ತಂದಿದೆ. ತೀರ್ಪಿನಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಹಿಜಬ್ ಪರ ತೀರ್ಪು ಬಂದಿದ್ದು ನಮ್ಗೆ ದೊಡ್ಡ ತೀರ್ಪು ಆಗಿದೆ ಎಂದು ಖುಷಿ ವ್ಯಕ್ತಪಡಿಸಿದ್ರು.