Sunday, October 1, 2023
spot_img
- Advertisement -spot_img

I.N.D.I.A ಅಲ್ಲ,ನಮ್ಮ ಬಿಜಾಪುರದ ʼಇಂಡಿʼ ಇದ್ದಂತೆ : ಯತ್ನಾಳ್‌ ವ್ಯಂಗ್ಯ

ಗದಗ : ತುಷ್ಟೀಕರಣ ಮಾಡಿ ಭಾರತವನ್ನು ಅಸ್ಥಿರ ಮಾಡಬೇಕು ಸನಾತನ ಧರ್ಮ ನಾಶ ಮಾಡಬೇಕು ಅನ್ನೋ ಸಲುವಾಗಿ ಇಂಡಿ ಅಲಯನ್ಸ್ ಆಗಿದೆ I.N.D.I.A ಅಲ್ಲ ಅದು ನಮ್ಮ ವಿಜಯಪುರದಲ್ಲಿ ಇಂಡಿ ಇದೆ ಆ ಇಂಡಿ ಇದ್ದಂಗೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿ ಜನಿವಾರ ಹಾಕ್ಕೊಂಡು ಬ್ರಾಹ್ಮಣ ಅಂತಾ ಹೇಳ್ತಾನೆ, ಇಲ್ಲಿ ಬಂದು ನಮಾಜ್ ಮಾಡಿ ಮುಸ್ಲಿಂ ಅಂತಾ ಹೇಳ್ತಾನೆ, ವಿದೇಶದಲ್ಲಿ ದೇಶದ ವಿರುದ್ಧ ಮಾತಾಡ್ತಾರೆ, ಅಲ್ಲಿ ಮುಸ್ಲಿಂ ಲೀಗ್ ಪ್ಯೂರ್ ಸೆಕ್ಯೂಲರ್ ಪಾರ್ಟಿ ಅಂತಾ ಹೇಳ್ತಾನೆ, ಅದರ ಹೆಸರೇ ಮುಸ್ಲಿಂ ಲೀಗ್ ಅಂತಾ ಇದೆ ಎಂದು ಹರಿಹಾಯ್ದರು.

ಇದನ್ನೂ ಓದಿ: ‘ಭಾರತದೊಂದಿಗೆ ಯುದ್ಧಕ್ಕೆ ಬಂದ್ರೆ ನಿಮ್ಮ ಮಕ್ಕಳನ್ನು ಬೇರೆಯವರು ಸಾಕಬೇಕಾಗುತ್ತೆ’

ಒಂದೇ ಕೋಮಿಗೆ 50% ಸಬ್ಸೀಡಿ ಇದೆ, ದಲಿತರು, ಹಿಂದುಳಿದ ವರ್ಗದವರು, ಆರ್ಥಿಕ ಹಿಂದುಳಿದವರಿಗೆ 50% ಕೊಡಬೇಕಲ್ಲ, ಅವರಿಗಿಲ್ಲ ಅವರಿಗಷ್ಟೇ 50% ಇದು ತುಷ್ಟೀಕರಣ ಎಂದು ಹರಿಹಾಯ್ದರು. ದಲಿತರು, ಹಿಂದುಳಿದ ಜನಾಂಗಕ್ಕೆ 50% ಕೊಡಿ, ಜಾತಿ ತಾರತಮ್ಯ ಮಾಡಿ ಅವಶ್ಯ ಇಲ್ಲ, ಮನಸ್ಸು ಪೂರ್ತಿ ಬಿಜೆಪಿ ಹೇಳಿಲ್ಲ, ಎಲ್ಲೂ ಸಮರ್ಥನೆ ಮಾಡಿಲ್ಲ, ಮೂರ್ನಾಲ್ಕು ತಿಂಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ವಿಫಲ ಆಗಿದ್ದಕ್ಕೆ ಅದನ್ನು ಮುಚ್ಚಿ ಹಾಕಲು ಇದನ್ನು ಮಾಡಿದ್ದಾರೆ ಎಂದು ತಿಳಿಸಿದರು.

ಸನಾತನ ಧರ್ಮಕ್ಕೆ ಬಯ್ಯೋದು, ಸನಾತನ ಧರ್ಮಕ್ಕೆ ಬಯ್ದರೆ ಇವರು ನಾಶ ಆಗ್ತಾರೆ, ಏಡ್ಸ್ ಕುಷ್ಟರೋಗ ಎಲ್ಲಾ ಇವರ ಕುಟುಂಬಕ್ಕೆ ಬರುತ್ತೆ ಎಂದು ಸನಾತನ ಧರ್ಮವನ್ನು ಟೀಕಿಸುವವರ ವಿರುದ್ಧ ಆಕ್ರೋಶಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles