ಮೈಸೂರು : ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಸವಾದಿ ಶರಣರು, ರಾಜೇಂದ್ರ ಸ್ವಾಮೀಜಿ ಪ್ರೇರಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುತ್ತೂರು ಮಠದಲ್ಲಿ ನಡೆದ ರಾಜೇಂದ್ರ ಶ್ರೀಗಳ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯ ಸಾಕಾರ ಆಗಬೇಕಾದರೆ ಸರ್ವರಿಗೂ ಶಿಕ್ಷಣ ಲಭಿಸಬೇಕು. ಆ ಕೆಲಸವನ್ನು ರಾಜೇಂದ್ರ ಶ್ರೀಗಳು ಮಾಡಿದ್ದಾರೆ. ಗುಣಮಟ್ಟದ ಶಿಕ್ಷಣ ಪಡೆದರೆ ವೈಜ್ಞಾನಿಕ, ವೈಚಾರಿಕ ವಿಚಾರ ತಿಳಿಯುತ್ತದೆ. ವ್ಯವಸ್ಥೆಯಲ್ಲಿ ರಾಜಿಕೊಳ್ಳಮಾಡಿಕೊಳ್ಳಬಾರದು. ವಿಶ್ವಮಾನವ ದೃಷ್ಠಿಕೋನ ಎಲ್ಲರಲ್ಲೂ ಬೆಳೆದರೆ ನಾವು ಮನುಷ್ಯರು ಅಂತ ಹೇಳಿಕೊಳ್ಳಲು ಸಾಧ್ಯ ಎಂದರು.
ಸುತ್ತೂರು ಮಠ ಧರ್ಮ ಪ್ರಚಾರದ ಜೊತೆ ವಿದ್ಯಾ ಪ್ರಚಾರವನ್ನು ಮಾಡುತ್ತಿದೆ. ಆರೋಗ್ಯ ಕ್ಷೇತ್ರದಲ್ಲೂಅಪಾರವಾದ ಕೆಲಸ ಮಾಡಿದೆ. ನಾವು ಎಷ್ಟು ವರ್ಷ ಬದುಕಿದ್ದೇವೆ ಎಂಬುವುದು ಮುಖ್ಯವಲ್ಲ. ಆ ಬದುಕನ್ನು ಸಾರ್ಥಕ ಮಾಡಿಕೊಂಡಿದ್ದೇವೆ ಎಂಬ ಭಾವನೆ ಬರಬೇಕು. ರಾಜೇಂದ್ರ ಶ್ರೀಗಳು ಶೈಕ್ಷಣಿಕ ಕ್ಷೇತ್ರವನ್ನು ಜಾಗೃತಗೊಳಿಸಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿದ್ದಾರೆ. ಇಷ್ಟು ಹೆಮ್ಮರವಾಗಿ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿದ ಶ್ರೀಗಳಿಗೆ ಎಷ್ಟು ಧನ್ಯವಾದ ಹೇಳಿದರು ಸಾಲದು ಎಂದು ಹೇಳಿದರು.
ಇದನ್ನೂ ಓದಿ : ʼಕಾಂಗ್ರೆಸ್‌ನವ್ರು ಹಸಿವಾದ್ರೆ ಯಾವ ಬಾಗಿಲು ತಟ್ತಾರೆ ಅನ್ನೋದು ಗೊತ್ತುʼ
ಸಂಸದ ಪ್ರತಾಪ್ ಸಿಂಹ ಮಾತನಾಡಿ, ನನ್ನನ್ನು ಶ್ರೀಮಠ ತುಂಬಾ ಗೌರವಯುತವಾಗಿ ನಡೆಸಿಕೊಂಡಿದೆ. ಅದಕ್ಕೆ ನಾನು ಸದಾ ಅಬಾರಿಯಾಗಿದ್ದೇನೆ ಎಂದರು. ರಾಜೇಂದ್ರ ಶ್ರೀಗಳ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಚಿಕ್ಕ ಕಥೆ ಹೇಳಿ ರಾಜೇಂದ್ರ ಸ್ವಾಮೀಜಿಯ ಕೊಡುಗೆ ಸ್ಮರಿಸಿದರು. ವಿದ್ಯೆ ಹಾಗೂ ಅನ್ನದಾನಕ್ಕೆ ಪ್ರಾಮುಖ್ಯತೆ ನೀಡಿರುವ ರಾಜೇಂದ್ರ ಶ್ರೀಗಳ ಕಾರ್ಯ ಅವಿಸ್ಮರಣೀಯ ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಸಿಎಂ ಪುತ್ರ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸುತ್ತೂರು ಶ್ರೀಗಳು ಮನವಿ ಪತ್ರಗಳನ್ನು ನೀಡಿದರು. ವೇದಿಕೆ ಮೇಲೆ ಸಿಎಂ ಹಿಂದೆ ಕುಳಿತು ಸುಮಾರು ೧೦ ಮನವಿ ಪತ್ರಗಳನ್ನು ಸ್ವೀಕರಿಸಿದ ಯತೀಂದ್ರ, ಸ್ವಾಮೀಜಿ ಜೊತೆ ಚರ್ಚೆ ನಡೆಸಿದರು
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.