ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ ಇನ್ನ ಕೆಲವೇ ತಿಂಗಳುಗಳಷ್ಟೇ ಬಾಕಿ ಇದ್ದು, ಜೆಡಿಎಸ್ ಭರ್ಜರಿ ತಯಾರಿ ನಡೆಸುತ್ತಿದೆ. ಇಂದು ಬಸವನಗುಡಿಯ ಐತಿಹಾಸಿಕ ಗವಿಗಂಗಾಧರಸ್ವಾಮಿ ದೇವಸ್ಥಾನದ ಬಳಿ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನಿಡಿದರು.
ಬಳಿಕ ಮಾತನಾಡಿದ ಅವರು, 1994ರಲ್ಲಿನ ವಿಧಾಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಇಲ್ಲೇ ಪೂಜೆ ಸಲ್ಲಿಸಿತ್ತು. ಆಗ ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಚುನಾವಣೆಗೆ ಹೋಗಿದ್ದೆವು. ನವೆಂಬರ್ 1ರಿಂದ ಪಂಚರತ್ನ ರಥಯಾತ್ರೆ ಆರಂಭಿಸಲು ಚಿಂತಿಸಿದ್ದೆ. ಇಂದು ಒಳ್ಳೇ ದಿನವಾದ್ದರಿಂದ ಪಂಚರತ್ನ ರಥಯಾತ್ರೆಗೆ ಇಂದೇ ಚಾಲನೆ ನೀಡಿದೆವು. ನಾಳೆ ಅಣ್ಣಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುವುದು. ನವೆಂಬರ್ 1ರಂದು ಕೋಲಾರದಲ್ಲಿ ಸಮಾವೇಶ ಆಯೋಜಿಸಿದ್ದೇವೆ ಎಂದರು.
ಇನ್ನು ಮುಂದುವರೆದು ಮಾತನಾಡಿದ ಅವರು, ಬಸವನಗುಡಿ ಹಿಂದೆ ಜೆಡಿಎಸ್‌ನ ಭದ್ರಕೋಟೆಯಾಗಿತ್ತು. ಆದ್ರೆ ನಮ್ಮ ಚಿಕ್ಕ ತಪ್ಪಿನಿಂದ ಈ ಕ್ಷೆತ್ರ ನಮ್ಮ ಕೈ ತಪ್ಪಿಹೋಗಿದೆ. ಈ ಬಾರಿ ಈ ಕ್ಷೇತ್ರವನ್ನ 123 ಗುರಿಯಲ್ಲಿ ಬಸವನಗುಡಿ ಮೊದಲ ಸ್ಥಾನದಲ್ಲಿರಬೇಕು ಆ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 1 ರಂದು ಸಭೆ ನಡೆಸಿ ಬಸವನಗುಡಿ ಅಭ್ಯರ್ಥಿಯನ್ನ ಘೋಷಣೆ ಮಾಡುತ್ತೇವೆ. ಸದ್ಯಕ್ಕೆ ನಮ್ಮ ಹಿರಿಯ ನಾಯಕರಾದ ಬಾಗೇಗೌಡ್ರು ಹಾಗೂ ಶರವಣ ರಾಜು ಅವರು ಕೂತು ಮಾತನಾಡಿ ಸಮಾಜ ಸೇವಕ ಅರಮನೆ ಶಂಕರ್ ಅವರಿಗೆ ಪಕ್ಷ ಸಂಘಟನೆ ಮಾಡಲು ಹೇಳಿದ್ದಾರೆ. ನಾನೂ ಕೂಡ ಅರಮನೆ ಶಂಕರ್‌ಗೆ ಈ ಭಾಗದಲ್ಲಿ ಪಕ್ಷ ಸಂಘಟನೆ ಮಾಡಲು ಸೂಚನೆ ಮಾಡಿದ್ದೇನೆ. ನವೆಂಬರ್ 1ರಂದು ಕೋಲಾರದಲ್ಲಿ ಸಮಾವೇಶ ಆಯೋಜಿಸಿದ್ದೇವೆ ಎಂದು ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿ ಅಲ್ಲಿ ಎಲ್ಲ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡುತ್ತೇನೆ ಎಂದರು. ವಿಶೇಷ ಅಂದ್ರೆ ಅರಮನೆ ಶಂಕರ್ ಅವರ ಸಮಾಜ ಸೇವೆಯನ್ನ ಗುರುತಿಸಿ ಟಿಕೇಟ್ ನೀಡಿರುವ ಕುಮಾರಸ್ವಾಮಿ, ಅರಮನೆ ಶಂಕರ್ ಅವರನ್ನ ಮನೆಮನೆ ಶಂಕರ್ ಎಂದು ಸಂಬೋಧಿಸಿದ್ರು.