ಬೆಂಗಳೂರು : ಕರ್ನಾಟಕದ ಸಿಎಂ ಬೊಮ್ಮಾಯಿಯವರಿಗೆ ಹುಟ್ಟು ಹಬ್ಬದ ಸಂಭ್ರಮ ಕಾಮನ್ ಮ್ಯಾನ್’ ಸಿಎಂ ಆಗಿರುವ ಸಿಎಂ ಬೊಮ್ಮಾಯಿಯವರು ಎಲ್ಲರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವದವರು. ಹುಟ್ಟು ಹಬ್ಬದ ಖುಷಿಯಲ್ಲಿರುವ ಸಿಎಂ ಬೊಮ್ಮಾಯಿಯವರಿಗೆ ರಾಜಕಾರಣಿಗಳು ನಟ-ನಟಿಯರು, ಅಭಿಮಾನಿಗಳು ಪ್ರೀತಿಯ ಶುಭ ಕೋರುತ್ತಿದ್ದಾರೆ.
ತಂದೆ ಹಾಕಿಕೊಟ್ಟ ಮಾರ್ಗದರ್ಶನದಂತೆ ನಡೆದ ಬೊಮ್ಮಾಯಿ, ಜನತಾ ಪರಿವಾರದಲ್ಲಿ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಅವರ ರಾಜಕೀಯ ಕಾರ್ಯದರ್ಶಿಯಾದರು. ಜೆಡಿಯುನಿಂದ ಪರಿಷತ್ ಸದಸ್ಯರಾಗಿದ್ದಾಗ ಆಡಳಿತಾತ್ಮಕ ವಿಚಾರಗಳಲ್ಲಿ ಹೊಂದಿದ್ದ ಜ್ಞಾನವನ್ನು ನೋಡಿ ಬಿ.ಎಸ್.ಯಡಿಯೂರಪ್ಪ ಕೂಡ ಮೆಚ್ಚಿಕೊಂಡಿದ್ದರು. ಬಳಿಕ 2008ರಲ್ಲಿ ಬಿಜೆಪಿ ಸೇರ್ಪಡೆಯಾಗಿ ಶಾಸಕರಾಗಿ ಆಯ್ಕೆಯಾದರು. ಅಷ್ಟೇ ಅಲ್ಲ ಮೊದಲ ಬಾರಿಗೆ ಯಡಿಯೂರಪ್ಪನವರ ಸಂಪುಟ ಪ್ರವೇಶಿಸಿದರು.
ಸಿಎಂ ಬೊಮ್ಮಾಯಿಯವರು ಹುಟ್ಟು ಹಬ್ಬದ ದಿನವಾದ ಇಂದು ತಮ್ಮ ತಂದೆ-ತಾಯಿಯವರ ಗದ್ದುಗೆಗೆ ಹೋಗಿ ಫೂಜೆ ಸಲ್ಲಿಸಿದರು.
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು, ಅವರು ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಅವರು ಜನರ ಸೇವೆಯಲ್ಲಿ ದೀರ್ಘ ಮತ್ತು ಆರೋಗ್ಯಕರ ಜೀವನ ನಡೆಸಲಿ ಎಂದು ಪ್ರಧಾನಿ ಮೋದಿ ಟ್ಟೀಟ್ ಮಾಡಿ ಶುಭ ಕೋರಿದ್ದಾರೆ.
ಆರೋಗ್ಯ ಮತ್ತು ವೈದ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಿಎಂ ಬೊಮ್ಮಾಯಿಯವರಿಗೆ ಶುಭ ಕೋರಿದ್ದಾರೆ. ಈಗ ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಿಸುವ ಗುರಿಯೊಂದಿಗೆ ಕರ್ನಾಟಕವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿರುವ ರಾಜ್ಯದ ನೆಚ್ಚಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈಬಲಪಡಿಸೋಣ. ಭಗವಂತ ಅವರಿಗೆ ಉತ್ತಮ ಆಯುರಾರೋಗ್ಯ ನೀಡಿ ರಾಜ್ಯಕ್ಕೆ ಇನ್ನಷ್ಟುಸೇವೆ ಸಲ್ಲಿಸುವ ಶಕ್ತಿ ನೀಡಲಿ ಎಂದು ಮನಸಾರೆ ಹಾರೈಸೋಣ.
ಕರ್ನಾಟಕದ ಮುಖ್ಯಂತ್ರಿಗಳಾದ ಶ್ರೀಯುತ ಬಸವರಾಜ ಬೊಮ್ಮಾಯಿಯವರಿಗೆ ಜನ್ಮ ದಿನದ ಶುಭಾಶಯಗಳು, ನಿಮ್ಮ ಪರಿಶ್ರಮ ಹೀಗೆಯೇ ಮುಂದುವರೆಯಲಿ, ನಿಮ್ಮ ಸುದೀರ್ಘ , ಆರೋಗ್ಯ ಪೂರ್ಣ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಅಮಿತ್ ಷಾ ಟ್ವೀಟ್ ಮಾಡಿದ್ದಾರೆ.