ಬೆಂಗಳೂರು: ಕಾಯಮಾತಿಗೆ ಆಗ್ರಹಿಸಿ ಗುತ್ತಿಗೆ ಪೌರಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್, ‘ಹನ್ನೊಂದು ಸಾವಿರದ ನೂರು ಜನ ಪೌರ ಕಾರ್ಮಿಕರು ಎರಡನೇ ಆದೇಶಕ್ಕೆ ಒಳಪಡಲಿದ್ದಾರೆ. ಮೊದಲನೇ ಆದೇಶದಲ್ಲಿ 3 ಸಾವಿರ ಪೌರಕಾರ್ಮಿಕರು ಖಾಯಂ ನೌಕರರಾಗಲಿದ್ದಾರೆ. ಒಟ್ಟು 14.600 ಜನರನ್ನು ಕಾಯಂ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ’ ಎಂದು ಮಾಹಿತಿ ನೀಡಿದರು.
ಬಿಬಿಎಂಪಿ (BBMP) ಕೇಂದ್ರ ಕಚೇರಿ ಆವರಣದಲ್ಲಿ ಮಾತನಾಡಿದ ಅವರು, ಎರಡೂ ಆದೇಶಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿದ್ದು ಸಮಸ್ಯೆ ಆಗಬಾರ್ದು ಎನ್ನುವ ಕಾರಣಕ್ಕೆ ಸರ್ಕಾರಕ್ಕೆ ವಾಪಸ್ ಕಳಿಸಲಾಗಿದೆ. ಸದ್ಯದಲ್ಲೆ ಸರ್ಕಾರದ ಒಪ್ಪಿಗೆ ಮೇರೆಗೆ 14.600 ಸಾವಿರ ಪೌರಕಾರ್ಮಿಕರನ್ನು ಖಾಯಂ ನೌಕರರನ್ನಾಗಿ ಮಾಡಿಕೊಳ್ಳಲು ಆದೇಶ ನೀಡಲಾಗುವುದು. ಈಗಾಗಲೇ ನಾವು ಪೌರಕಾರ್ಮಿಕರೊಂದಿಗೆ ಮಾತನಾಡಿದ್ದೇವೆ; ಅವರು ಪ್ರತಿಭಟನೆ ಕೈಬಿಡಲಿದ್ದಾರೆ’ ಎಂದು ಹೇಳಿದರು.
ಇದನ್ನೂ ಓದಿ; ಕಾವೇರಿ ಜಲ ವಿವಾದ : ಸುಪ್ರೀಂ ಮೊರೆಹೋದ ದರ್ಶನ್ ಪುಟ್ಟಣ್ಣಯ್ಯ
ನಗರದಲ್ಲಿ ಡೆಂಘೀ ಪ್ರಕರಣಗಳು ಜಾಸ್ತಿ ಆಗಿದೆ:
ನಗರದಲ್ಲಿ ಮಳೆ ಬಿಟ್ಟುಬಿಟ್ಟು ಬರುತ್ತಿರುವುದರಿಂದ ಡೆಂಘೀ ಪ್ರಕರಣಗಳು ಜಾಸ್ತಿ ಆಗಿದೆ. ನಿರಂತರ ಮಳೆ ಬರ್ತಿಲ್ಲ; ಇದ್ರಿಂದ ಸೊಳ್ಳೆಗಳು ಜಾಸ್ತಿ ಆಗ್ತಿವೆ. ಎರಡು ವರ್ಷಗಳ ಹಿಂದೆ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಅದೇ ಪರಿಸ್ಥಿತಿ ಉಂಟಾಗಿದ್ದು, ಡೆಂಘೀ ಪ್ರಕರಣಗಳ ಸಂಖ್ಯೆ ಜಾಸ್ತಿ ಆಗಿದೆ. ಮುಂಜಾಗ್ರತ ಕ್ರಮ ಕೈಗೊಳ್ಳತ್ತೇವೆ’ ಎಂದು ಕಮಿಷನರ್ ಮಾಹಿತಿ ನೀಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.