ಹಾವೇರಿ : ಈಶ್ವರಪ್ಪನವರು ಇಲ್ಲಿಯೂ ಮಗನನ್ನು ಬಿಟ್ಟು ವಾತಾವರಣ ಕೆಡಿಸ್ತಾ ಇದ್ದಾರೆ ಎಂದು ಹಾವೇರಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂತೇಶ್‌ಗೆ ಎಂಪಿ ಟಿಕೆಟ್ ಕೊಡಿಸಬೇಕೆಂಬ ಈಶ್ವರಪ್ಪ ನಡೆಗೆ ಕೌರವ ಸಿಟ್ಟಿಗೆದ್ದಿದ್ದಾರೆ. ಚುನಾವಣೆಯಲ್ಲಿ ವಿರೋಧ ಮಾಡಿದವ್ರನ ಕರೆದುಕೊಂಡು ಕ್ಷೇತ್ರದಲ್ಲಿ ಓಡಾಡ್ತಿದ್ದಾರೆ, ಈಶ್ವರಪ್ಪನವರು ವಲಸೆ ಬಂದು ನಮ್ಮ ಬಗ್ಗೆ ಈ ಹಿಂದೆ ಮಾತಾಡಿದ್ದಾರೆ, ಮತ್ತೆ ಕಾಲ್ ಮಾಡಿದಾಗ ನಾನು ಹೇಳಿಲ್ಲಾ,ಕ್ಷಮಿಸಿ ಅಂತಾರೆ, ಹಿರಿಯ ನಾಯಕರಾಗಿ ಈ ಥರ ಮಕ್ಕಳ ಥರ ಮಾತಾಡಿದ್ರೆ ಹೇಗೆ ?
ಸರ್ವೆ ಮಾಡ್ತಿದ್ದಾರೆ ಯಾರು ಅಭ್ಯರ್ಥಿ ಅನ್ನೋದು ನೋಡಿ ಟಿಕೆಟ್ ಕೊಡ್ತಾರೆ, ಏನೂ ಇಲ್ದೆ ಸುಮ್ಮನೆ ಬಂದು ವಾತಾವರಣ ಕೆಡಿಸ್ತಿದ್ದಾರೆ, ನಾನು ಕಟೀಲ್ ಅವರಿಗೂ ಟಿಕೆಟ್ ಭರವಸೆ ಬಗ್ಗೆ ಕೇಳಿದಾಗ ಅವರು ಇಲ್ಲ ಅಂದಿದ್ದಾರೆ, ಹೀಗಿದ್ದರೂ ಕ್ಷೇತ್ರದಲ್ಲಿ ಮಗನಿಗಾಗಿ ಓಡಾಡೋದು ಯಾಕೆ ? ಹಿರಿಯ ನಾಯಕರು ಒಡಕು ಇರುವ ಜಾಗದಲ್ಲಿ ನೀರು ಎರೆಯಬಾರದು, ಪಕ್ಷ ಹೇಳಿದಾಗ ಕ್ಷೇತ್ರಕ್ಕೆ ಹೋಗೋದು ಅರ್ಥ ಇದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಸುಳ್ಳು ಸುದ್ದಿಗೆ ಕಡಿವಾಣ: ಹೊಸ ಕಾನೂನು ರಚಿಸುತ್ತೇವೆ ಎಂದ ಗೃಹ ಸಚಿವರು
ಯಾರು ಹೇಳದೆ ಓಡಾಡಿದ್ರೆ ತಪ್ಪು ಅರ್ಥ ಆಗುತ್ತದೆ, ಪ್ರಧಾನಿ ಮೋದಿಯವ್ರ ಹೆಸರಿನ ಮೇಲೆ ಎಂಪಿ ಚುನಾವಣೆ ನಡಿಯೋದು, ಇಲ್ಲಿ ಯಾರ ಮೇಲೂ ನಡೆಯಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಚಂದ್ರಯಾನದ ಬಗ್ಗೆ ನಟ ಪ್ರಕಾಶ್ ರೈ ವ್ಯಂಗ್ಯ ಹಿನ್ನಲೆ ಇದು ಮೂರ್ಖತನದ ಹೇಳಿಕೆಗಳು, ಇಡೀ ವಿಶ್ವ ಭಾರತದ ಕಡೆ ನೋಡ್ತಾ ಇದೆ, ಇದು ಭಾರತ ದೇಶದ ದೊಡ್ಡ ಸಾಧನೆ ಎಂದರು. ನಾಳೆ ಎಲ್ಲಾ ಕಾತುರದಿಂದ ಕಾಯ್ತಾ ಇದಾರೆ, ಆ ಮನುಷ್ಯ ಎಲ್ಲೋ ಕೂತು ಮಾತಾಡೋದು ಸರಿಯಲ್ಲ, ನಾವೆಲ್ಲರೂ ಚಂದ್ರಯಾನ ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಮಾಡ್ತಾ ಇದ್ದೇವೆ ಎಂದು ತಿಳಿಸಿದರು.
ಇನ್ನೂ ಆಪರೇಷನ್ ಹಸ್ತ ವಿಚಾರಕ್ಕೆ ಪ್ರತಿಕ್ರಿಯಿಸಿ, ಸೋಮಶೇಖರ್ ಎರಡು ದಿನಗಳ ಹಿಂದೆ ಬಿಜೆಪಿ ಮಿಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ನಾನು ಫೋನ್ ಮಾಡಿ ಮಾತಾಡಿದ್ದೇನೆ, ನಾನು ಹಳೆ ಕಾಂಗ್ರೆಸ್ಸಿಗ ಹೀಗಾಗಿ ಕ್ಷೇತ್ರಕ್ಕೆ ಬಂದಾಗ ಮಾತಾಡಿದ್ದೇನೆ, ಇದನ್ನೆ ಸುಮ್ಮನೆ ದೊಡ್ಡದು ಮಾಡಿದ್ದಾರೆ, ಕಾಂಗ್ರೇಸ್ ನಲ್ಲಿ ಮೂರು ಗುಂಪು ಆಗಿವೆ, ಪರಮೇಶ್ವರರದ್ದು, ಸಿದ್ದರಾಮಯ್ಯನವರದ್ದು, ಡಿಕೆ ಶಿವಕುಮಾರ್ ರದ್ದು ಅಂತಾ ಗುಂಪು ಇವೆ, ಚುನಾವಣೆ ಬರ್ತಾ ಇದೆ, ಗಮನ ಬೇರೆಡೆ ಸೆಳೆಯಲು ಈ ಥರ ಮಾಡ್ತಾ ಇದ್ದಾರೆ ಎಂದು ವಿವರಿಸಿದರು.
ಕಾಂಗ್ರೆಸ್ ಪಕ್ಷದವರದ್ದು ಹಾಸ್ಯಸ್ಪದ ನಡೆಯಾಗಿದೆ, ಬೇರೆ ಪಕ್ಷದಿಂದ ಶಾಸಕರನ್ನ ಕರೆತರುತ್ತಿದ್ದಾರೆ, ಇದರಲ್ಲೇ ಗೊತ್ತಾಗ್ತಾ ಇದೆ ಅಲ್ಲಿ ಸರಿಯಿಲ್ಲ ಅಂತಾ, ನಾವು ಪಕ್ಷ ಬಿಟ್ಟು ಬಾಂಬೆಗೆ ಹೋದಾಗ ಸಿದ್ಧರಾಮಯ್ಯ ಹೇಳಿದ್ದರು ಸೂರ್ಯ ಚಂದ್ರ ಇರುವ ತನಕ 17 ಶಾಸಕರನ್ನು ಕರೆದುಕೊಳ್ಳಲ್ಲ ಎಂದವ್ರು ಈಗ ಯಾಕೆ ಕರೆಸಿಕೊಳ್ತಾಯಿದ್ದಾರೆ, ಈಗ 136 ಶಾಸಕರಿದ್ದರೂ ಕೂಡಾ ಕರೆತರಲು ಯತ್ನ ಮಾಡಲಾಗ್ತಿದೆ, ಅಲ್ಲಿ ಅಭದ್ರತೆ ಕಾಡ್ತಾ ಇದೆ, ಸೋಮಶೇಖರ ಮನಸ್ಸಿಗೆ ಬೇಜಾರ್ ಆಗಿದೆ, ಅಲ್ಲಿಗೆ ಹೋದ್ರು ಇವರೇನೂ ಮಂತ್ರಿಯಾಗೊಲ್ಲ, ಅನುದಾನಕ್ಕೆ ಹೋದಾಗ ಭೇಟಿಯಾಗಿರಬೇಕು ಹೀಗಾಗಿ ಹೋಗಿರುತ್ತಾರೆ, ಯಾರು ನಮ್ಮ ಪಕ್ಷ ಬಿಟ್ಟು ಹೋಗೊಲ್ಲ ಎಂದು ವಿವರಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.