ಬಾಗಲಕೋಟೆ: ಮಾಜಿ ಸಚಿವ ಮುರುಗೇಶ ನಿರಾಣಿ ವಿರುದ್ಧ ಭಿಕ್ಷಾಟನೆ ಅಭಿಯಾನ ನಡೆಸಲು ನಾವು ನಿರ್ಧರಿಸಿದ್ದೇವೆ ಎಂದು ರೈತ ಸಂಘದ ಮುಖಂಡ ಯಲ್ಲಪ್ಪ ಹೆಗಡೆ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆ 24 ವರ್ಷಗಳಿಂದ ತೆರಿಗೆ ಕಟ್ಟಿಲ್ಲವೆಂದು ಆರೋಪಿಸಿದ್ದು, ನಾನು ಮಾಡಿದ ಕೆಲವು ಆರೋಪಗಳಿಗೆ ಸಾಕ್ಷ್ಯಾಧಾರ ಗಳಿವೆ ಎಂದು ಸಮರ್ಥಿಸಿಕೊಂಡರು.
ಮಾಜಿ ಸಚಿವ ಮುರಗೇಶ ನಿರಾಣಿ ವಿರುದ್ಧ ಬರುವ ಆಗಸ್ಟ್ 28 ರಂದು ವಿನೂತನ ಪ್ರತಿಭಟನೆಗೆ ರೈತ ಸಂಘ ಸಜ್ಜಾಗಿದ್ದು, ತಮ್ಮ ವಕೀಲರ ಮೂಲಕ ಲೀಗಲ್ ನೋಟಿಸ್‘ಗೆ ಉತ್ತರಿಸಿದ್ದೇನೆ ಎಂದರು. ಮಾಜಿ ಸಚಿವ ಮುರಗೇಶ ನಿರಾಣಿ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಸಕ್ಕರೆ,ಅಲಾರಾಮ್,ಸೀರೆ ವಿತರಿಸಿದ್ದರು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಇದನ್ನೂ ಓದಿ; ಲೋಕಾಯುಕ್ತ ದಾಳಿ; ಸರ್ವೆ ಸೂಪರ್‌ವೈಸರ್ ಬಳಿ ಐದೈದು ಬಾರ್ ಲೈಸೆನ್ಸ್!
ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆ ಕಳೆದ 24 ವರ್ಷಗಳಿಂದ ತೆರಿಗೆ ತುಂಬಿಲ್ಲ ಎಂದು ಕಿಡಿಕಾರಿದರು. ಇನ್ನೂ ಬೀಳಗಿಯಲ್ಲಿ ಆಗಸ್ಟ 28 ರಿಂದ ಮಾಜಿ ಸಚಿವ ನಿರಾಣಿ ಆರೋಗ್ಯದ ಹಿತದೃಷ್ಟಿಯಿಂದ ಸ್ಥಳೀಯರಿಂದ ಐದು, ಹತ್ತು ರೂಪಾಯಿ ಸೇರಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮನಿಯಾರ್ಡರ್ ಮಾಡಲಾಗುವುದು, ಭಿಕ್ಷಾಟಣೆ ಮೂಲಕಹಣ ಸಂಗ್ರಹಿಸುತ್ತೇವೆ, ಮಾನಸಿಕ ,ಶಾರೀರಿಕ ಹಿಂಸೆಯಾಗಿದ್ದರಿಂದ ಅದರ ಖರ್ಚು ವೆಚ್ಚಕ್ಕೆ ಹಣ ಸಂಗ್ರಹಿಸುತ್ತೇವೆ , ಆಸ್ಪತ್ರೆಗೆ ತೋರಿಸಿಕೊಳ್ಳಲಿ ಎಂದು ಹಣ ಸಂಗ್ರಹಿಸುತ್ತೇವೆ, ವಿಭಿನ್ನವಾದ ಹೋರಾಟ ಮಾಡುತ್ತೇವೆ ಎಂದರು.
ಅಂದಹಾಗೆ ರೈತ ಸಂಘದ ಮುಖಂಡ ಯಲ್ಲಪ್ಪ ಹೆಗಡೆ ವಿರುದ್ಧ ಮಾಜಿ ಸಚಿವ ಮುರುಗೇಶ ಅವರಿಂದ ಐದು ಕೋಟಿ ಪರಿಹಾರ ಕೇಳಿ ಲೀಗಲ್ ನೋಟಿಸ್ ನೀಡಲಾಗಿದೆ. ಯಲ್ಲಪ್ಪ ಹೆಗಡೆ ಚುನಾವಣಾ ಸಂದರ್ಭದಲ್ಲಿ ಮಾಡಿದ ಆರೋಪಗಳಿಂದ ಶಾರೀರಿಕವಾಗಿ ಮಾನಸಿಕವಾಗಿ ನೋವಾಗಿದೆ ಎಂದು ನಿರಾಣಿ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. ತಮ್ಮ ವಕೀಲರ ಮುಖಾಂತರ ಯಲ್ಲಪ್ಪ ಹೆಗಡೆ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಲೀಗಲ್ ನೋಟಿಸ್’ನಲ್ಲಿ ಮಾನಸಿಕ ಹಾಗೂ ಶಾರೀರಿಕ ಹಿಂಸೆಗೆ ಐದು ಕೋಟಿ ಪರಿಹಾರ ಕೇಳಿದ್ದಾರೆ.
ಯಲ್ಲಪ್ಲ ಹೆಗಡೆ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರೈತಸಂಘದ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು,.ಈಗ ಚುನಾವಣೆ ಮುಗಿದ ಬಳಿಕ ಇಬ್ಬರೂ ಪರಾಜಿತ ಅಭ್ಯರ್ಥಿಗಳ ನಡುವೆ ಜಟಾಪಟಿ ಶುರುವಾಗಿದೆ.. ಕಳೆದ ಚುನಾವಣೆಯಲ್ಲಿ ಬೀಳಗಿಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಟಿ.ಪಾಟೀಲ್ ಗೆದ್ದಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.