ಬೆಂಗಳೂರು: ದೀಪಾವಳಿಯ ಪಟಾಕಿಗೆ ದೊಡ್ಡ ನಗರಗಳ ಗಾಳಿಯ ಗುಣಮಟ್ಟ ತೀರ ಕುಸಿತ ಕಂಡು ಜನ ಉಸಿರಾಡಲು ಸಹ ಸಾಧ್ಯವಾಗದ ಗ್ಯಾಸ್ ಚೇಂಬರ್‌ಗಳಾಗಿ ಮಾರ್ಪಟ್ಟಿವೆ. ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅಪಾಯಕಾರಿ ಮಟ್ಟ ತಲುಪಿದೆ.
ಇದೆಲ್ಲದರ ನಡುವೆ ಸಿಲಿಕಾನ್ ಸಿಟಿ ಬೆಂಗಳೂರು ವಿರುದ್ಧ ದಿಕ್ಕಿನತ್ತ ಸಾಗಿದೆ. ಈ ಬಾರಿಯ ದೀಪಾವಳಿ ಪರಿಸರದ ಮೇಲೆ ಅತ್ಯಂತ ಕಡಿಮೆ ಮಾಲಿನ್ಯ ಬೀರಿದೆ ಎಂದು ತಿಳಿದುಬಂದಿದೆ. ಕ್ಲೈಮೇಟ್ ಟ್ರೆಂಡ್ಸ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಚೆನ್ನೈನಲ್ಲಿ 12-ಗಂಟೆಗಳ ಸರಾಸರಿ PM2.5 ಮಟ್ಟ (2.5 ಮೈಕ್ರಾನ್ ಅಥವಾ ಅದಕ್ಕಿಂತ ಕಡಿಮೆ ವ್ಯಾಸದ ವಾಯುಗಾಮಿ ಕಣಗಳ ಮಟ್ಟಗಳು) 114.7 g/m3 (ಪ್ರತಿ ಘನ ಮೀಟರ್‌ಗೆ ಮೈಕ್ರೋಗ್ರಾಂಗಳು) ದಾಖಲಾಗಿವೆ.
ಇದನ್ನೂ ಓದಿ: ಬಿಎಸ್‌ವೈ ಪುತ್ರನಿಗೆ ಪಟ್ಟಾಭಿಷೇಕ: ಮೈತ್ರಿ ದಾಳ..ಮತ್ತೆ ಅಧಿಕಾರದ ಪಣತೊಟ್ಟ ಹೈಕಮಾಂಡ್!
ಹೈದರಾಬಾದ್‌ನಲ್ಲಿ PM2.5 ಮಟ್ಟವು 88.4 g/m3 ದಾಖಲಾಗಿದ್ದರೆ ಬೆಂಗಳೂರಿನಲ್ಲಿ 68.1 g/m3 ನಷ್ಟು ದಾಖಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ PM2.5 ಮಟ್ಟಗಳ ದೈನಂದಿನ ಪ್ರಮಾಣಿತ ಮಿತಿಯು 15 g/m3 ಆಗಿರಬೇಕು. ಬೆಂಗಳೂರು ಈ ಮಟ್ಟ ಮೀರಿದ್ದರೂ ದೇಶದ ಇತರೆ ಮೆಟ್ರೋ ನಗರಗಳಿಗೆ ಹೋಲಿಸಿದರೆ ಮಾಲಿನ್ಯ ಪ್ರಮಾಣ ಗಣನೀಯ ಮಟ್ಟದಲ್ಲಿ ಇಳಿಕೆ ಕಂಡಿದೆ. ಕಳೆದ ವರ್ಷ ಇದೇ ವೇಳೆಗೆ ಬೆಂಗಳೂರಲ್ಲಿ ವಾಯು ಮಾಲಿನ್ಯದ ಮಟ್ಟ 81.4ರಷ್ಟಿತ್ತು.
ಇದನ್ನೂ ಓದಿ: ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆಯಿಂದ ನನಗೆ ಅನುಕೂಲವಾಗಲಿದೆ: ಹೆಚ್.ನಿಂಗಪ್ಪ
ಬೆಂಗಳೂರಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಿರುವುದು ಹಾಗೂ ಅಧಿಕೃತ ಮಳಿಗೆಗಳಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅನುವು ಮಾಡಿಕೊಟ್ಟಿರುವುದು ಸಹ ಮಾಲಿನ್ಯ ಪ್ರಮಾಣ ಕಡಿಮೆಯಾಗಲು ಕಾರಣ ಎನ್ನಬಹುದು. ಪಟಾಕಿ ಮಾರಾಟದ ಮೇಲಿನ ಕಠಿಣ ನಿಯಮದಿಂದಾಗಿ ಮಾರಾಟದ ಪ್ರಮಾಣ ಸಹ ಇಳಿಕೆಯಾಗಿರುವುದನ್ನು ಗಮನಿಸಬಹುದು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.