Monday, December 4, 2023
spot_img
- Advertisement -spot_img

ಸರ್ಕಾರಿ ಯೋಜನೆ ಕುರಿತು ಸುಳ್ಳು ಸುದ್ದಿ ಹರಡಿದ ಆರೋಪ; ಪತ್ರಕರ್ತ ಸುಧೀರ್ ಚೌಧರಿ ವಿರುದ್ಧ ಎಫ್‌ಐಆರ್

ಬೆಂಗಳೂರು: ರಾಜ್ಯ ಸರ್ಕಾರದ ಯೋಜನೆ ಕುರಿತಂತೆ ಸುಳ್ಳು ಸುದ್ದಿ ಹರಡಿದ ಆರೋಪದಡಿ ಹಿರಿಯ ಪತ್ರಕರ್ತ ಸುಧೀರ್ ಚೌಧರಿ ಮತ್ತು ಹಿಂದಿ ನ್ಯೂಸ್ ಚಾನಲ್ ಆಜ್‌ತಕ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಶೇಷಾದ್ರಿಪುರಂ ಪೊಲೀಸರು ಮಂಗಳವಾರ ತಡರಾತ್ರಿ ದಾಖಲಿಸಿದ ಎಫ್‌ಐಆರ್‌ನಲ್ಲಿ ಐಪಿಸಿ ಸೆಕ್ಷನ್ 505 (ಸಾರ್ವಜನಿಕ ದೌರ್ಜನ್ಯಕ್ಕೆ ಕಾರಣವಾಗುವ ಹೇಳಿಕೆಗಳು) ಮತ್ತು 153 ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಎಸಗುವುದು. ಸಾಮರಸ್ಯವನ್ನು ಕದಡುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಇಂದು INDIA ಮೈತ್ರಿಕೂಟದ ಪ್ರಥಮ ಸಮನ್ವಯ ಸಮಿತಿ ಸಭೆ

ಘಟನೆ ಸಂಬಂಧ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ (ಕೆಎಂಡಿಸಿ) ಸಹಾಯಕ ಆಡಳಿತ ಅಧಿಕಾರಿ ಶಿವಕುಮಾರ್ ಎಸ್ ದೂರು ಸಲ್ಲಿಸಿದ್ದರು. ದೂರಿನಲ್ಲಿ ಕರ್ನಾಟಕವು ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮಾತ್ರ ಆರ್ಥಿಕ ಸಹಾಯಧನವನ್ನು ನೀಡುತ್ತದೆ ಮತ್ತು ಹಿಂದೂಗಳಳಿಗೆ ಅನ್ಯಾಯ ಮಾಡಿದೆ ಎಂದು ಸುಧೀರ್ ಆರೋಪಿಸಿದ್ದರು. ವಾಹನ ಖರೀದಿ ಯೋಜನೆಯೂ ಅಲ್ಪಸಂಖ್ಯಾತರಿಗಾಗಿ ಮಾತ್ರ ನೀಡಲಾಗಿದ್ದು, ‘ಅಲ್ಪಸಂಖ್ಯಾತ ತುಷ್ಟೀಕರಣ’ ಎಂದು ಕರೆದಿದ್ದರು.

ಆದರೆ ಈ ಯೋಜನೆಯು ಕೇವಲ ಅಲ್ಪಸಂಖ್ಯಾತರಿಗಾಗಿ ಅಲ್ಲ ಎಂದು ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿದ್ದ ಬಳಿಕ ಆಜ್‌ತಕ್ ವಾಹಿನಿ ವಿಡಿಯೋವನ್ನು ಡಿಲೀಟ್ ಮಾಡಿತ್ತು.

ರಾಜ್ಯ ಸರ್ಕಾರ ವಾರ್ಷಿಕ ಕುಟುಂಬದ ಆದಾಯ, ವಯಸ್ಸು, ವಾಸಸ್ಥಳ ಇತ್ಯಾದಿಗಳ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದರೆ, ಧಾರ್ಮಿಕ ಅಲ್ಪಸಂಖ್ಯಾತರ ಬಡ ಸದಸ್ಯರಿಗೆ ಆಟೋಗಳು, ಕ್ಯಾಬ್‌ಗಳು ಮತ್ತು ಗೂಡ್ಸ್ ಟ್ಯಾಕ್ಸಿಗಳನ್ನು ಖರೀದಿಸಲು ಕೆಎಂಡಿಸಿ ಶೇ.50ರಷ್ಟು ಸಹಾಯಧನವನ್ನು 3 ಲಕ್ಷ ರೂ.ವರೆಗೆ ನೀಡುತ್ತದೆ.

ಇದನ್ನೂ ಓದಿ: Retail Inflation Declines : ಚಿಲ್ಲರೆ ಹಣದುಬ್ಬರವು ಶೇ.6.83 ಕ್ಕೆ ಇಳಿಕೆ!

ಕರ್ನಾಟಕದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಡಾ ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಬಡ ಹಿಂದೂಗಳಿಗಾಗಿ ಇದೇ ರೀತಿಯ ಯೋಜನೆಯನ್ನು ನಡೆಸಲಾಗುತ್ತಿದೆ ಎಂದು ಶಿವಕುಮಾರ್ ಹೇಳಿದರು. ಇಂತಹ ಯೋಜನೆ ಕೇವಲ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮಾತ್ರ ಎಂದು ಹೇಳುವುದು ಸುಳ್ಳು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಘಟನೆ ಕುರಿತು ಟ್ವೀಟ್ (ಎಕ್ಸ್‌) ಮಾಡಿದ್ದ ಸಚಿವ ಪ್ರಿಯಾಂಕ್ ಖರ್ಗೆ, ‘ಆಜ್‌ತಕ್‌ನ ಆಂಕರ್ ಬಿಜೆಪಿ ಸಂಸದರು ಮೊದಲು ಪ್ರಾರಂಭಿಸಿದ್ದ ಸರ್ಕಾರದ ಯೋಜನೆಗಳ ಬಗ್ಗೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಇದು ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತವಾಗಿದ್ದು, ಸರ್ಕಾರ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಿದೆ ಎಂದಿದ್ದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles