ನವದೆಹಲಿ: ಲೋಕಮತ್ ಸಂಸದೀಯ ಪ್ರಶಸ್ತಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಭಾಜನರಾಗಿದ್ದಾರೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ತೇಜಸ್ವಿ ಸೂರ್ಯರಿಗೆ ನೀಡಲಾಗಿದೆ.
17 ನೇ ಲೋಕಸಭಾ ಅವಧಿಯ ಎರಡನೇ ಅತೀ ಕಿರಿಯ ಸಂಸದರಾಗಿ 28ರ ವಯಸ್ಸಿನಲ್ಲಿ ಸಂಸದರಾಗಿ ಆಯ್ಕೆಯಾಗಿರುವ ತೇಜಸ್ವೀ ಸೂರ್ಯ, ಮಾಹಿತಿ ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರೂ ಆಗಿದ್ದು, ಪ್ರಾದೇಶಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಅನೇಕ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ.
ದತ್ತಾಂಶ ಸುರಕ್ಷತೆ ಬಗ್ಗೆ, ವೈಯುಕ್ತಿಕ ದತ್ತಾಂಶ ಸುರಕ್ಷತೆ ಮಸೂದೆಯ ಜಂಟಿ ಸ್ಥಾಯಿ ಸಮಿತಿ ಸದಸ್ಯರಾಗಿ ನೀತಿ ನಿಯಮಾವಳಿಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೃಷಿ, ಶಿಕ್ಷಣ,ವಿಮಾನಯಾನ, ರೇಲ್ವೆ, ಐಟಿ, ಬಿಟಿ, ಅಂತರಿಕ್ಷ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುತ್ತಾರೆ ಎಂದು ಸಂಸದರ ಕಚೇರಿ ತಿಳಿಸಿದೆ.