ಹಾಸನ : ಹಾಸನ ಟಿಕೆಟ್ ನನಗ್ಯಾಕಿಲ್ಲ ? ಹಾಸನದಲ್ಲಿ ಪಕ್ಷವನ್ನು ಗೆಲ್ಲಿಸಿಯೇ ತೀರುವೆ, ಮಹಿಳಾ ಮತದಾರರನ್ನು ಸೆಳೆಯಲು ನನ್ನ ಸ್ಪರ್ಧೆ ಪೂರಕವಾಗಿದೆ ಎಂದು ಭವಾನಿ ರೇವಣ್ಣ ಹೆಚ್ ಡಿ ದೇವೇಗೌಡರ ಮೊರೆ ಹೋಗಿದ್ದಾರೆ.
ಕಾರ್ಯಕರ್ತರ ಬಲ, ಸ್ವಂತಬಲದಿಂದ ಎಲೆಕ್ಷನ್ ಎದುರಿಸುವೆ, ಪ್ರೀತಂಗೌಡ ಎದುರು ಪ್ರಬಲ ಪೈಪೋಟಿ ನೀಡಲು ಸಿದ್ದಳಿದ್ದೇನೆ. ಹಾಸನದಲ್ಲಿ ಕುಟುಂಬದ ಪ್ರತಿಷ್ಠೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವೆ ಹೀಗಾಗಿ ಟಿಕೆಟ್ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಹಾಸನಕ್ಕೆ ನಾನೇ ಅಭ್ಯರ್ಥಿ ಎಂದು ಭವಾನಿ ರೇವಣ್ಣ ಹೇಳಿಕೆ ಕೊಟ್ಟು ಹಾಸನದಾದ್ಯಂತ ಚುನಾವಣಾ ಪ್ರಚಾರ ನಡೆಸಿದ್ದರು.
ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹಾಗೂ ಅವರ ಸಹೋದರ ಹೆಚ್‌ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ನಡುವೆ ಹಾಸನ ಟಿಕೆಟ್‌ಗಾಗಿ ಪೈಪೋಟಿ ತೀವ್ರಗೊಂಡಿದೆ. ಹಾಸನದಲ್ಲಿ ನಾನು ಸ್ಪರ್ಧಿಸಿಯೇ ಸಿದ್ಧ ಎಂದು ಭವಾನಿ ಅವರು ಹಠಕ್ಕೆ ಬಿದ್ದರೆ, ಅಲ್ಲಿ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡಲ್ಲ ಎಂದು ಕುಮಾರಸ್ವಾಮಿ ಜಿದ್ದಿಗೆ ಬಿದ್ದಿದ್ದಾರೆ.
ಹಾಸನದಲ್ಲಿ ಮಾಜಿ ಶಾಸಕ ದಿವಂಗತ ಎಚ್ ಎಸ್ ಪ್ರಕಾಶ್ ಪುತ್ರ ಹೆಚ್ ಸ್ವರೂಪ್‌ಗೆ ಟಿಕೆಟ್ ಕೊಡಬೇಕು ಅಂತಾ ಜೆಡಿಎಸ್ ನ ಒಂದು ಗುಂಪು ಒತ್ತಾಯ ಮಾಡುತ್ತಿದೆ. ಅಂದಹಾಗೆ ಹಾಸನದಲ್ಲಿ ಪಂಚರತ್ನ ರಥಯಾತ್ರೆ ನಡೆಯುತ್ತಿದ್ದು, ಟಿಕೆಟ್ ವಿಚಾರ ಇನ್ನೂ ಬಗೆಹರಿದಿಲ್ಲ ಬಹುಷ: ಮಾರ್ಚ್ 11 ರಂದು ಎರಡನೇ ಪಟ್ಟಿ ಬಿಡಗಡೆಯಾಗೋ ಸಂಭವ ವಿದ್ದು ಜೆಡಿಎಸ್ ವರಿಷ್ಠರು ಟಿಕೆಟ್ ಬಗ್ಗೆ ಅಂದು ನಿರ್ಧಾರ ತೆಗೆದುಕೊಳ್ಳುತ್ತಾರ ಅನ್ನೋದು ಗೊತ್ತಾಗಬೇಕಿದೆ.