ಹಾಸನ : ಭವಾನಿ ರೇವಣ್ಣ ಅವರು ಗೆದ್ದೇ ಗೆಲ್ಲುತ್ತಾರೆ. ಅವರು ಈ ಕ್ಷೇತ್ರಕ್ಕೆ ಅನಿವಾರ್ಯ ಅಲ್ಲ, ಅವರೇ ಸೂಕ್ತ ಅಭ್ಯರ್ಥಿಯಾಗಿದ್ದಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಹಾಸನದಲ್ಲಿ ಭವಾನಿ ರೇವಣ್ಣ ಅವರು ಗೆದ್ದೇ ಗೆಲ್ಲುತ್ತಾರೆ. ಅವರು ಈ ಕ್ಷೇತ್ರಕ್ಕೆ ಅನಿವಾರ್ಯವಾಗಿ ಸ್ಪರ್ಧೆ ಮಾಡುವುದು ಬೇಡ. ಅವರೇ ಸೂಕ್ತ ಎಂದು ನಿರ್ಧರಿಸಿ ಟಿಕೆಟ್ ನೀಡಿದರೂ ಗೆಲ್ಲುತ್ತಾರೆ ಎಂದು ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳ ಅಭಿಪ್ರಾಯವೂ ಆಗಿದೆ ಎಂದರು.
ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡೋದು ಬಿಡೋದು ದೊಡ್ಡವರಿಗೆ ಬಿಟ್ಟದ್ದು ಯಾವುದೇ ಕ್ಷೇತ್ರ ಅಭ್ಯರ್ಥಿಯಾದರೂ ದೇವೇಗೌಡರು ನಿರ್ಧರಿಸಬೇಕು, ಹಾಸನ ದೇವೇಗೌಡರ ಕ್ಷೇತ್ರ, ದೇವೇಗೌಡರು ನಿರ್ಧರಿಸಿದ್ದೇ ಅಂತಿಮ ಎಂದರು.
ನನಗೂ ಸಾವಿರಾರು ಜನ ಬಂದು ಹೇಳುತ್ತಾರೆ. ಸರ್ ಭವಾನಿ ರೇವಣ್ಣ ಅವರು ಇಲ್ಲಿ ಸ್ಪರ್ಧೆ ಮಾಡಿದರೆ ಹೀಗೆ ಆಗುತ್ತದೆ. ಆ ರೀತಿ ಒಂದು ಲಾಭಗಳಾಗಬಹುದು ಈ ತರ ನಷ್ಟ ಆಗಬಹುದು ಎಂದು ಚರ್ಚೆ ಮಾಡಿದ್ದಾರೆ. ಇನ್ನು ಮಾಜಿ ಸಚಿವ ಎಚ್.ಡಿ. ರೇವಣ್ಣ ಮೊದಲಿನಿಂದ ನಡೆಸಿಕೊಂಡು ಬಂದಿರುವ ಜಿಲ್ಲೆ ಇದು, ಎಲ್ಲ ಅಭಿಪ್ರಾಯಗಳನ್ನು ತಿಳಿದುಕೊಂಡು ನಂತರ ಕೂತ್ಕಂಡು ಚರ್ಚಿಸಿ ತೀರ್ಮಾನ ಮಾಡುತ್ತಾರೆ ಎಂದರು.