Monday, December 4, 2023
spot_img
- Advertisement -spot_img

ರಾಮಚರಿತ ಮಾನಸವು ಸೈನೈಡ್ ಇದ್ದಂತೆ; ಬಿಹಾರ ಶಿಕ್ಷಣ ಸಚಿವ ವಿವಾದ

ಪಾಟ್ನಾ: ರಾಮಚರಿತ ಮಾನಸವು ಸೈನೈಡ್ ಇದ್ದಂತೆ ಎಂದು ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ನಡೆದಿದ್ದ ಹಿಂದಿ ದಿವಸ ಕಾರ್ಯಕ್ರಮದಲ್ಲಿ ಮಾತನಾಡುವಾಗ ಈ ರೀತಿಯ ಹೇಳಿಕೆ ನೀಡಿದ್ದಾರೆ.

‘ನೀವು ಊಟದಲ್ಲಿ ಐವತ್ತೈದು ರೀತಿಯ ಭಕ್ಷ್ಯಗಳನ್ನು ಬಡಿಸಿ ಮತ್ತು ಅದರಲ್ಲಿ ಪೊಟ್ಯಾಸಿಯಮ್ ಸೈನೈಡ್ ಅನ್ನು ಬೆರೆಸಿದರೆ, ನೀವು ಅದನ್ನು ತಿನ್ನುತ್ತೀರಾ? ಹಿಂದೂ ಧರ್ಮದ ಗ್ರಂಥಗಳ ವಿಷಯವೂ ಅದೇ” ಎಂದು ಚಂದ್ರಶೇಖರ್ ಹೇಳಿದರು.

ಇದನ್ನೂ ಓದಿ: ಸಂತೋಷ್‌ ಲಾಡ್‌ ದೊಡ್ಡ ವ್ಯಕ್ತಿಯಾಗಿ ಬೆಳೆದು ಮಠಕ್ಕೆ ಬರುತ್ತಾರೆ

ರಾಮಾಯಣವನ್ನು ಆಧರಿಸಿರುವ ಹಿಂದೂ ಧಾರ್ಮಿಕ ಪುಸ್ತಕವಾದ ರಾಮಚರಿತ ಮಾನಸವನ್ನು ಪೊಟ್ಯಾಸಿಯಮ್ ಸೈನೈಡ್‌ಗೆ ಹೋಲಿಸಿದ್ದಾರೆ. ಬಾಬಾ ನಾಗಾರ್ಜುನ್ ಮತ್ತು ಲೋಹಿಯಾ ಸೇರಿದಂತೆ ಅನೇಕ ಲೇಖಕರು ಇದನ್ನು ಟೀಕಿಸಿದ್ದಾರೆ ಎಂದು ಚಂದ್ರಶೇಖರ್ ಹೇಳಿದರು.

ರಾಮಚರಿತ ಮಾನಸಕ್ಕೆ ನನ್ನ ಆಕ್ಷೇಪ ದೃಢವಾಗಿದೆ ಮತ್ತು ಅದು ನನ್ನ ಜೀವನದುದ್ದಕ್ಕೂ ಹಾಗೆಯೇ ಇರಲಿದೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಎಂದರು.

ಇದನ್ನೂ ಓದಿ: ಮುಂದಿನ ವಾರ ಬೆಂಬಲಿಗರೊಂದಿಗೆ ಕಾಂಗ್ರೆಸ್‌ಗೆ ಸೇರ್ತೆನೆ : ಹೆಚ್‌ಡಿಡಿ ಆಪ್ತ ಎಂ ಶ್ರೀಕಾಂತ್

ಸಚಿವರ ಹೇಳಿಕೆ ಖಂಡಿಸಿರುವ ಬಿಜೆಪಿ, ‘ರಾಮಚರಿತ ಮಾನಸ ಕುರಿತು ಸಚಿವ ಚಂದ್ರಶೇಖರ್ ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ನಿತೀಶ್ ಕುಮಾರ್ ಕೇಳುತ್ತಿಲ್ಲವೇ? ಚಂದ್ರಶೇಖರ್ ಅವರಿಗೆ ಯಾವುದೇ ಸಮಸ್ಯೆ ಇದ್ದರೆ ಮತಾಂತರವಾಗಲಿ ಎಂದಿದೆ.

ಇದಕ್ಕೂ ಮೊದಲು ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮುಹಮ್ಮದ್ ‘ಮರ್ಯಾದಾ ಪುರುಷೋತ್ತಮ’ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದರು.

‘ಜಗತ್ತಿನಲ್ಲಿ ನಂಬಿಕೆ ಕೊನೆಗೊಂಡಾಗ, ಅಪ್ರಾಮಾಣಿಕರು, ಅಗೋಚರ ಶಕ್ತಿಗಳು ಎಲ್ಲೆಲ್ಲೂ ಕಾಣಿಸಿಕೊಂಡಾಗ, ಮಧ್ಯ ಏಷ್ಯಾದಲ್ಲಿ ದೇವರು ಮಹಾನ್ ಪುರುಷೋತ್ತಮ ಪ್ರವಾದಿ ಮುಹಮ್ಮದ್ ಅವರನ್ನು ಸೃಷ್ಟಿಸಿದನು. ಇಸ್ಲಾಂ ದುಷ್ಟರ ವಿರುದ್ಧ, ಅಪ್ರಾಣಿಕರ ವಿರುದ್ಧ ಧರ್ಮ ಭಕ್ತರಿಗಾಗಿ ಹುಟ್ಟಿಕೊಂಡಿತು’ ಎಂದಿದ್ದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles