Thursday, September 28, 2023
spot_img
- Advertisement -spot_img

ಶಿವರಾಜ್ ಸಂಗಪ್ಪ ತಂಗಡಗಿ ಅವರ ಸಂಪೂರ್ಣ‌ ಮಾಹಿತಿ

ಹೆಸರು: ಶಿವರಾಜ್ ಸಂಗಪ್ಪ ತಂಗಡಗಿ

ಹುದ್ದೆ: ಶಾಸಕ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ 

ಕ್ಷೇತ್ರ: ಕನಕಗಿರಿ ವಿಧಾನಸಭೆ ಕ್ಷೇತ್ರ

ಜನನ: 10/06/1971

ಸ್ಥಳ: ಇಳಕಲ್, ಬಾಗಲಕೋಟೆ ಜಿಲ್ಲೆ

ತಂದೆ: ಸಂಗಪ್ಪ ತಂಗಡಗಿ

ತಾಯಿ: ಹುಲಿಗೆಮ್ಮ

ಪತ್ನಿ: ವಿದ್ಯಾ ತಂಗಡಗಿ

ಮಕ್ಕಳು: ಶಶಾಂಕ್, ಕಿರಣ್‌ಕುಮಾರ್ ಮತ್ತು ತನುಷಾ

ವಾಸಸ್ಥಳ: ಕಾರಟಗಿ

ಸಹೋದರರು: ಐದು ಜನ, ವೆಂಕಟೇಶ ತಂಗಡಗಿ, ಶ್ರೀನಿವಾಸ ತಂಗಡಗಿ, ನಾಗರಾಜ್ ತಂಗಡಗಿ, ರವಿ ಮತ್ತು ಚಂದ್ರು ತಂಗಡಗಿ ಹಾಗೂ ಮೂವರು ಸಹೋದರಿಯರಿದ್ದಾರೆ.

ಬಾಲ್ಯ ಮತ್ತು ಶಿಕ್ಷಣ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಇಳಕಲ್‌ನಲ್ಲಿ ಪೂರ್ಣಗೊಳಿಸಿದರು. ಬಾಗಲಕೋಟೆಯ ಬಸವೇಶ್ವರ ವಿಜ್ಞಾನ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಹಾಗೂ ಇಳಕಲ್‌ನ ಎಸ್‌ವಿಎಂ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎಸ್‌ಡಬ್ಲ್ಯು (ಸಮಾಜಶಾಸ್ತ್ರ) ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು.

ರಾಜಕೀಯ ಜೀವನ:

*ಶಿವರಾಜ್‌ ಸಂಗಪ್ಪ ತಂಗಡಗಿ ಅವರು 2001ರಲ್ಲಿ ಪ್ರಪ್ರಥಮ ಬಾರಿಗೆ ಇಳಕಲ್ ಪುರಸಭೆಯ 30ನೇ ವಾರ್ಡ್ ಸದಸ್ಯರಾಗಿ ಕಾಂಗ್ರೆಸ್‌ನಿಂದ ಆಯ್ಕೆಯಾದರು.

*ಬಳಿಕ ಬಿಜೆಪಿ ಸೇರ್ಪಡೆಯಾಗಿ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದರು.

*2008ರಲ್ಲಿ ಮೀಸಲು ಕ್ಷೇತ್ರವಾದ ಕೊಪ್ಪಳ ಜಿಲ್ಲೆ ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷವು ಬಿ ಫಾರಂ ನೀಡದ ಕಾರಣ, ಕನಕಗಿರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿ ಗೆದ್ದರು. ನಂತರ ಬಿಜೆಪಿಗೆ ಬೆಂಬಲ ನೀಡಿದರು.

*2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಂಪುಟ ದರ್ಜೆ ಸ್ಥಾನ ಪಡೆದರು.

*ಬಿಜೆಪಿ ಸರ್ಕಾರದಲ್ಲಿ 2008 ಮೇ 30ರಿಂದ 2011 ಸೆಪ್ಟೆಂಬರ್‌ವರೆಗೆ ಮೊದಲ ಬಾರಿಗೆ ಸಂಪುಟ ದರ್ಜೆ ಸಚಿವರಾಗಿ ಎಪಿಎಂಸಿ ಹಾಗೂ ಸಕ್ಕರೆ ಖಾತೆಗಳ ನಿರ್ವಹಿಸಿದರು.

*2011ರ ಸೆಪ್ಟೆಂಬರ್ ಕೊನೆಯಲ್ಲಿ ಎಪಿಎಂಸಿ ಹಾಗೂ ಸಣ್ಣ ಕೈಗಾರಿಕೆ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿರ್ವಹಣೆ.

*2011ರಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಂಡರು. ನಂತರ ಸುಪ್ರೀಂಕೋರ್ಟ್ ಆದೇಶದಂತೆ ಮೇ 13, 2012ರಿಂದ ಶಾಸಕರಾಗಿ ಮುಂದುವರಿದರು.

* 2023ರ ವಿಧಾನಸಭೆ ಚುನಾವಣೆಯಲ್ಲೂ ಗೆಲುವು ಸಾಧಿಸುವ ಮೂಲಕ ಮೂರನೆ‌ ಬಾರಿಯೂ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಪ್ರಸ್ತುತ ಇವರು ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸ್ಥಾನವನ್ನು ಅಲಂಕರಿಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles