Friday, March 24, 2023
spot_img
- Advertisement -spot_img

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್‌ ಜನ್ಮದಿನ; ಮೋದಿ ಸೇರಿ ಹಲವು ಗಣ್ಯರಿಂದ ಶುಭ ಹಾರೈಕೆ

ನವದೆಹಲಿ: ಮಾಜಿ ಪ್ರಧಾನಿ, ಕಾಂಗ್ರೆಸ್‌ನ ಹಿರಿಯ ನಾಯಕ ಡಾ.ಮನಮೋಹನ್ ಸಿಂಗ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಸತತ ಎರಡು ಅವಧಿಗೆ ಪ್ರಧಾನಿಯಾಗಿದ್ದ ಡಾ. ಮನಮೋಹನ್‌ ಸಿಂಗ್ ಅವರು ಇಂದು 90ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ 90ನೇ ವಸಂತಕ್ಕೆ ಕಾಲಿಟ್ಟಿರುವ ಮನಮೋಹನ್‌ ಸಿಂಗ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಹಲವುರ ಶುಭ ಹಾರೈಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಟ್ವಿಟ್ಟರ್ ನಲ್ಲಿ ಸಿಂಗ್ ಅವರಿಗೆ ಶುಭಕೋರಿದ್ದು, ‘ಮನಮೋಹನ್ ಸಿಂಗ್ ಅವರಂತಹ ಆಳವಾದ ಜ್ಞಾನವುಳ್ಳ ಪ್ರಧಾನಿಯ ಕೊರತೆ ಇಂದು ಭಾರತದಲ್ಲಿ ಎದ್ದು ಕಾಣುತ್ತಿದೆ. ಅವರ ಪ್ರಮಾಣಿಕತೆ, ಸಭ್ಯತೆ ಮತ್ತು ಸಮರ್ಪಣಾ ಮನೋಭಾವ ನಮಗೆಲ್ಲ ಸ್ಫೂರ್ತಿಯ ಮೂಲ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆಸಾಮಾಜಿಕ ಮಾಧ್ಯಮಗಳ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಹಲವರು ಶುಭಾಶಯ ಹೇಳಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ,.ದೂರದೃಷ್ಟಿ, ಜನಪರ ಕಾಳಜಿ ಮತ್ತು ಪ್ರಾಮಾಣಿಕ ನಡವಳಿಕೆಗಳಿಂದ ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದ ಸರಳ, ಸಜ್ಜನ, ಸತ್ಯವಂತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಬದುಕು ಮತ್ತು ಸಾಧನೆ ನಮಗೆ ಪ್ರೇರಣೆ ಎಂದು ಶುಭ ಹಾರೈಸಿದ್ದಾರೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜನ್ಮದಿನದ ಶುಭಾಶಯ ತಿಳಿಸಿದ್ದು, ಈ ಕುರಿತು ಟ್ವೀಟ್ ಮಾಡಿರುವ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಸುದೀರ್ಘ ಮತ್ತು ಆರೋಗ್ಯಕರ ಜೀವನವನ್ನು ದಯಪಾಲಿಸಲಿ ಎಂದು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಅನೇಕ ಗಣ್ಯರು ಮನಮೋಹನ್ ಸಿಂಗ್‌ ಅವರಿಗೆ ಶುಭ ಕೋರಿದ್ದಾರೆ. ಇವರೊಟ್ಟಿಗೆ ಇನ್ನೂ ಹಲವು ಗಣ್ಯರು ಮನಮೋಹನ್‌ಸಿಂಗ್‌ಗೆ ಟ್ವೀಟ್‌ ಮಾಡಿ ಶುಭಕೋರಿದ್ದಾರೆ.

Related Articles

- Advertisement -

Latest Articles