Wednesday, May 31, 2023
spot_img
- Advertisement -spot_img

ಬಿಜೆಪಿಯ 2 ನೇ ಪಟ್ಟಿ ಬಿಡುಗಡೆ: ಹೊಸ ಮುಖಗಳಿಗೆ ಅವಕಾಶ

ಬೆಂಗಳೂರು: ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಮಂಗಳವಾರ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಕಮಲ ಪಡೆ 23 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಈ ಬಾರಿ ಹೊಸ ಮುಖಕ್ಕೆ ಮಣೆ ಹಾಕಲಾಗಿದ್ದು , 2ನೇ ಪಟ್ಟಿಯಲ್ಲಿ ಹಾವೇರಿ ಶಾಸಕ ನೆಹರೂ ಓಲೆಕಾರ್, ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಕಲಘಟಗಿಯ ನಿಂಬಣ್ಣನವರ್, ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ, ಬೈಂದೂರಿನ ಸುಕುಮಾರಶೆಟ್ಟಿ, ದಾವಣಗೆರೆ ಉತ್ತರ ಶಾಸಕ ಎಸ್.ಎ.ರವೀಂದ್ರನಾಥ್, ಮಾಯಕೊಂಡ ಕ್ಷೇತ್ರದ ಶಾಸಕ ಲಿಂಗಣ್ಣಗೆ ಈ ಬಾರಿ ಕೊಕ್ ನೀಡಲಾಗಿದೆ.

ಗುರುಮಿಠಕಲ್ ಕ್ಷೇತ್ರದಿಂದ ಲಲಿತಾ ಅನಪುರ್ , ಕೆಜಿಎಫ್ ನಿಂದ ಅಶ್ವಿನಿ ಸಂಪಂಗಿಗೆ ಟಿಕೆಟ್ ನೀಡಲಾಗಿದೆ, ನಾಗರಾಜ್ ಛಬ್ಬಿಗೆ ಕಲಘಟಗಿ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಕಮಲಪಡೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಭ್ಯರ್ಥಿಗಳ 2 ನೇ ಪಟ್ಟಿಯನ್ನು ಹಂಚಿಕೊಂಡಿದೆ.

Related Articles

- Advertisement -

Latest Articles