ಮೂಡಿಗೆರೆ: ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್ ನೀಡದಂತೆ ಕಾರ್ಯಕರ್ತರು ಕೇಂದ್ರ ನಾಯಕರಿಗೆ ಪತ್ರ ಬರೆದಿದ್ದಾರೆ.
ಮೂಡಿಗೆರೆ ತಾಲೂಕಿನ ಪ್ರತಿ ಹೋಬಳಿಯ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ 10 ಅಂಶಗನ್ನೊಳಗೊಂಡ ಪತ್ರ ಬರೆದು ಇ-ಮೇಲ್ ಮಾಡಿದ್ದಾರೆ.
ಈ ಹಿಂದೆ ಕಾಡಾನೆ ದಾಳಿಯಿಂದ ಮಹಿಳೆ ಸಾವು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಎಂ.ಪಿ ಕುಮಾರಸ್ವಾಮಿ ಮೇಲೆ ಸಾರ್ವಜನಿಕರು ಹಲ್ಲೆ ಮಾಡಿ, ಅಂಗಿ ಹರಿದಿರುವ ಆರೋಪ ಕೇಳಿಬಂದಿತ್ತು. ಪಕ್ಷ ವಿರೋಧಿ, ಕಾರ್ಯಕರ್ತರ ಕಡೆಗಣನೆ, ವಿಧಾನಸೌಧದ ಮುಂದೆ ಪಕ್ಷ ಮರ್ಯಾದೆ ಕಳೆದದ್ದು, ನೋವು ಹೇಳಿಕೊಂಡವರ ವಿರುದ್ಧ ತಾನೇ ಬಟ್ಟೆ ಹರಿದುಕೊಂಡಿರುವ ಬಗ್ಗೆ, ಆಪ್ತರಿಗೆ ಮಾತ್ರ ಹೆಚ್ಚೆಚ್ಚು ಅನುದಾನ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈ ಎಲ್ಲ ಅಂಶಗಳನ್ನು ಕಾರ್ಯಕರ್ತರು ಪತ್ರದಲ್ಲಿ ಬರೆದು ಕೇಂದ್ರ ನಾಯಕರಿಗೆ ಕಳುಹಿಸಿದ್ದಾರೆ. ಕಾರ್ಯಕರ್ತರು ಮೂಡಿಗೆರೆ ಕ್ಷೇತ್ರ ಇಂದಿಗೂ ಅಭಿವೃದ್ಧಿ ಕಂಡಿಲ್ಲ. ಹಾಗಾಗಿ ಎಂಪಿಕೆಗೆ ಟಿಕೆಟ್ ನೀಡಬಾರದೆಂಬ ಅಸಮಧಾನ ವ್ಯಕ್ತಪಡಿಸಿದ್ದಾರೆ.