ನವದೆಹಲಿ : ಪಂಚರಾಜ್ಯಗಳ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ, ತೆಲಂಗಾಣ, ಮಿಜೋರಾಂಗೆ ಚುನಾವಣೆ ತಯಾರಿಯನ್ನು ಬಿಜೆಪಿ ಶುರು ಮಾಡಿಕೊಂಡಿದೆ.
ಬಿಜೆಪಿ ಪಂಚರಾಜ್ಯಗಳ ಚುನಾವಣೆ ಮೂಲಕ ಲೋಕಸಭಾ ಚುನಾವಣೆ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ. ಹೀಗಾಗಿ, ಪಂಚರಾಜ್ಯಗಳ ಚುನಾವಣೆಗೆ ದೇಶದ 18 ರಾಜ್ಯಗಳ 119 ಬಿಜೆಪಿ ಶಾಸಕರಿಗೆ ಚುನಾವಣಾ ಟಾಸ್ಕ್ ನೀಡಿದೆ. ಇದಕ್ಕಾಗಿ, 119 ಶಾಸಕರನ್ನು 5 ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಗಳಾಗಿ ಜವಾಬ್ದಾರಿಯನ್ನವಹಿಸಿದೆ.
ಇದನ್ನೂ ಓದಿ : ನಮ್ಮ ಒತ್ತಡಕ್ಕೆ ಮಣಿದು ಪ್ರಧಾನಿ ಗ್ಯಾಸ್ ಬೆಲೆ ಇಳಿಸಿದ್ದಾರೆ : ಡಿಕೆಶಿ
ಕೇಂದ್ರ ಬಿಜೆಪಿ ಶಾಸಕರು, ಪರಿಷತ್ ಸದಸ್ಯರು, ಪ್ರಧಾನ ಕಾರ್ಯದರ್ಶಿಗಳಿಗೆ ಚುನಾವಣಾ ಟಾರ್ಗೆಟ್ ನೀಡಿದೆ. ಈ ಮೂಲಕ ಎಲ್ಲೂ ಕೂಡ ಎಡವದೇ ಸಿದ್ದತೆ ಮಾಡಿಕೊಳ್ಳಲು ಬಿಜೆಪಿ ಪ್ಲಾನ್ ಮಾಡುತ್ತಿದೆ. ಶಾಸಕರಿಗೆ ಬಿಜೆಪಿ ನೀಡಿರುವ ಟಾಸ್ಕ್‌ಗಳೇನು? ಈ ಕೆಳಗಿದೆ ನೋಡಿ..
ಶಾಸಕರಿಗೆ ಬಿಜೆಪಿ ನೀಡಿರುವ ಟಾಸ್ಕ್‌ಗಳೇನು?
- ಚುನಾವಣಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ
- ಸ್ಥಳೀಯ ನಾಯಕರನ್ನು ಒಗ್ಗೂಡಿಸುವುದು
- ಕೇಂದ್ರದ ಯೋಜನೆಗಳ ಬಗ್ಗೆ ಜಾಗೃತಿ
- ಪ್ರಧಾನಿ ಮೋದಿ ಕಾರ್ಯಗಳ ಪ್ರಚಾರ
- ರಾಜ್ಯ ಚುನಾವಣೆಯ ಅನುಭಗಳನ್ನು ಹಂಚಿಕೊಂಡು ಕಾರ್ಯಕರ್ತ ಪಡೆಯನ್ನು ಸಜ್ಜುಗೊಳಿಸುವುದು ಇವರ ಕೆಲಸವಾಗಿದೆ.
ಇದನ್ನೂ ಓದಿ : ಗಡಿ ವಿಚಾರದಲ್ಲಿ ಮೋದಿ ಸುಳ್ಳು ಹೇಳ್ತಿದ್ದಾರೆ; ಪುನರುಚ್ಚರಿಸಿದ ರಾಹುಲ್
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.