Tuesday, March 28, 2023
spot_img
- Advertisement -spot_img

ಮನೀಶ್‌ ಸಿಸೋಡಿಯಾರವರ ಟ್ವಿಟರ್ ಖಾತೆ ಬ್ಲಾಕ್ ಮಾಡಿ:ಬಿಜೆಪಿ ಮನವಿ

ನವದೆಹಲಿ: ಆಪ್‌ ಸಚಿವ ಮನೀಶ್‌ ಸಿಸೋಡಿಯಾರವರ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡುವಂತೆ ಟ್ವಿಟ್ಟರ್‌ ಸಿಇಒ ಎಲಾನ್‌ ಮಸ್ಕ್‌ಗೆ ಬಿಜೆಪಿ ಆಗ್ರಹಿಸಿದೆ.

“ಮನೀಶ್ ಸಿಸೋಡಿಯಾ ಒಬ್ಬ ಕ್ರಿಮಿನಲ್. ಅವರ ಬದಲಾಗಿ ಬೇರೊಬ್ಬರು ಅವರ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಅವರ ಖಾತೆಯನ್ನು ದಯವಿಟ್ಟು ನಿರ್ಬಂಧಿಸಿ ಎಂದು ಹೇಳಿದ್ದಾರೆ. ಬಂಧನದಲ್ಲಿದ್ದರೂ ಮನೀಶ್ ಸಿಸೋಡಿಯಾ ಅಧಿಕೃತ ಟ್ವಿಟರ್ ಖಾತೆಯಿಂದ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುವ ಟ್ವೀಟ್ ವೊಂದು ಪೋಸ್ಟ್ ಆಗಿತ್ತು. ಈ ಟ್ವೀಟ್ ವೈರಲ್ ಆಗಿತ್ತು. ಹೀಗಾಗಿ ಖಾತೆಯನ್ನು ಬ್ಲಾಕ್ ಮಾಡುವಂತೆ ಟ್ವಿಟ್ಟರ್‌ ಸಿಇಒ ಎಲಾನ್‌ ಮಸ್ಕ್‌ ಅವರಿಗೆ ಬಿಜೆಪಿ ಆಗ್ರಹಿಸಿದೆ.

ದೀರ್ಘಕಾಲದವರೆಗೆ ಯಾವುದೇ ಪೋಸ್ಟ್ ಗಳು ಬಾರದ ಹಿನ್ನೆಲೆಯಲ್ಲಿ ಖಾತೆ ನಿಷ್ಕ್ರಿಯಗೊಂಡಿರಬಹುದು ಎಂದು ಕೆಲ ಎಎಪಿ ನಾಯಕರು ಹೇಳಿದ್ದಾರೆ. ಈ ಹಿಂದೆ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರ ಖಾತೆಯ ಬ್ಲೂ ಟಿಕ್ ಟ್ವಿಟರ್ ಹಿಂಪಡೆದಿತ್ತು. ಆದರೆ, ಇದರ ಹಿಂದಿನ ಕಾರಣವನ್ನು ಟ್ವಿಟರ್ ತಿಳಿಸಿರಲಿಲ್ಲ. ಅಂದಹಾಗೆ ಸಿಸೋಡಿಯಾ ಬಂಧನವು ಪ್ರಜಾಪ್ರಭುತ್ವಕ್ಕೆ ಕರಾಳ ದಿನ ಎಂದು ಅಭಿಪ್ರಾಯಪಟ್ಟಿತ್ತು.

Related Articles

- Advertisement -

Latest Articles