ಮಡಿಕೇರಿ: ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿರುವ ಬಿ.ಬಿ ಭರತೀಶ್ ದೈವಾರಾಧಾನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮಡಿಕೇರಿ ನಗರದ ಮುತ್ತಪ್ಪನ್ ದೇವಾಲಯದ ಆವರಣದಲ್ಲಿ ಒಂಭತ್ತು ಕೋಲಗಳ ಆರಾಧನೆ ನಡೆಯುವ ಸಂದರ್ಭದಲ್ಲಿ ಭರತೀಶ್ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ.
ತಮಗೆ ಟಿಕೆಟ್ ದೊರೆಯುವಂತೆ ಹಾಗೂ ಮಡಿಕೇರಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇದೇ ಮೊದಲ ಬಾರಿಗೆ ಮುತ್ತಪ್ಪನ್ ದೇವಾಲಯಕ್ಕೆ ಬಂದಿದ್ದೇನೆ. ದೇವರ ಬಳಿ ಇಷ್ಟಾರ್ಥ ಈಡೇರುವಂತೆ, ಕೊಡಗಿನಲ್ಲಿ ಪ್ರಕೃತಿ ವಿಕೋಪಗಳು ನಡೆಯದಂತೆ, ನಾಡು ಸಮೃದ್ಧಿಯಿಂದ ಇರುವಂತೆ ಪೂಜೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
ಅಂದಹಾಗೆ ಎಲೆಕ್ಷನ್ ನಡೆಯುವ ದಿನಾಂಕ ಘೋಷಣೆಯಾಗಿದ್ದು,3 ಪಕ್ಷಗಳು ತಮ್ಮದೇ ಆದ ತಯಾರಿಯಲ್ಲಿವೆ, ಪ್ರಚಾರ ಕಾರ್ಯ, ಟಿಕೆಟ್ ಹಂಚಿಕೆ, ಸಭೆ, ಹೀಗೆ ಬ್ಯುಸಿ ಇದ್ದು, ಟಿಕೆಟ್ ಆಕಾಂಕ್ಷಿಗಳು ಸಹ ಟಿಕೆಟ್ ಸಿಗಬಹುದೆನೋ ಅನ್ನೋ ನಿರೀಕ್ಷೆಯಲ್ಲಿ ಟೆಂಪಲ್ ರನ್ ಮಾಡ್ತಿದ್ದಾರೆ.